Showing posts with label ಸಾಧು ಸಂಗವಾಗದ ಬಾಳು ಬಾಳು ಆಗದಯ್ಯ purandara vittala. Show all posts
Showing posts with label ಸಾಧು ಸಂಗವಾಗದ ಬಾಳು ಬಾಳು ಆಗದಯ್ಯ purandara vittala. Show all posts

Friday, 6 December 2019

ಸಾಧು ಸಂಗವಾಗದ ಬಾಳು ಬಾಳು ಆಗದಯ್ಯ purandara vittala

ರಾಗ ಯದುಕುಲಕಾಂಭೋಜ ಆದಿ ತಾಳ

ಸಾಧು ಸಂಗವಾಗದ ಬಾಳು ಬಾಳು ಆಗದಯ್ಯ ||ಪ ||

ಸಾಧು ಸಂಗ ಎಂಬೊದಯ್ಯ
ಕ್ಷೇಮ ನಮಗೆ ನೀಡುವುದಯ್ಯ ||ಅ||

ಉದಯದಲಿ ಎದ್ದು ಹರಿಯ
ನಾಮವನ್ನು ಒದರಿಯೊದರಿ
ಸತತವು ನಿರ್ಮಲನಾಗಿ
ನಾರದವಂದ್ಯನ ಪಾಡಿ ಆಡುವಂಥ ||

ತನ್ನ ಮರೆತು ಘನ್ನಮಹಿಮನ
ಭಿನ್ನವಿಲ್ಲದ ಭಕುತಿಯಲಿ
ಚಿನ್ನಕೃಷ್ಣನ ಧ್ಯಾನದಲಿದ್ದು
ಧನ್ಯನಾಗಿ ಬಾಳುವಂಥ ||

ಪರಮ ಪುರುಷ ಕೃಷ್ಣರಾಯ
ಪರನೆಂಬ ಜ್ಞಾನದಲಿ
ಎರೆದು ಏಳು ದ್ವೇಷವ ಬಿಡು
ದುರುಳ ಆಸೆಯ ತರಿದಂಥ ||

ಆನಂದ ಆನಂದದಿಂದ
ಗೆಜ್ಜೆ ಕಟ್ಟಿ ಲಜ್ಜೆ ಬಿಡು(/ಟ್ಟು)
ಆನಂದಭಾಷ್ಪವಗೊಂಡು
ಆನಂದನಕಂದನ ಭಜಿಸುವ ||

ತಂದೆ ಪುರಂದರವಿಠಲರಾಯ
ಚಂದವಾಗಿ ಸಾಕುವ ನಮ್ಮನು
ಮಂದ ಬುದ್ಧಿಯಿಂದ ನೀವು ಮು-
ಕುಂದನ ಮರೆಯದಿರಿ ||
***

pallavi

sAdhu sangavAgada bALu bALu Agadayya

anupallavi

sAdhu sangha embodayya kSEma namage nIDuvudayya

caraNam 1

udayadali eddu hariya nAmavannu odariyodari satatavu nirmalanAgi nArada vandyana pADi Aduvantha

caraNam 2

tanna maredu ghanna mahimana bhinnavillada bhakutiyali cinna krSNana dhyAnadaliddu dhanyanAgi bALuvantha

caraNam 3

parama puruSa krSNarAya paranemba jnAnadali Eredu Elu dvESava biDu duruLa Aseya taridantha

caraNam 4

Ananda Anandadinda gejje kaTTi lajje biDu Ananda bhASpava goNDu Anandana kandana bhajisuva

caraNam 5

tande purandara viTTalarAya candavAgi sAkuva nammanu manda buddhiyinda nIvu mukundana mareyadiri
***