Showing posts with label ಏಳು ಶ್ರೀ ಗುರುರಾಯ ಬೆಳಗಾಯಿತಿಂದು prasannavenkata ELU SRI GURURAYA BELAGAAYITINDU. Show all posts
Showing posts with label ಏಳು ಶ್ರೀ ಗುರುರಾಯ ಬೆಳಗಾಯಿತಿಂದು prasannavenkata ELU SRI GURURAYA BELAGAAYITINDU. Show all posts

Friday, 3 December 2021

ಏಳು ಶ್ರೀ ಗುರುರಾಯ ಬೆಳಗಾಯಿತಿಂದು ankita prasannavenkata ELU SRI GURURAYA BELAGAAYITINDU




ಏಳು ಶ್ರೀ ಗುರುರಾಯ ಬೆಳಗಾಯಿತಿಂದು
ಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ ಪ.

ಏಳು ಗುರು ರಾಘವೇಂದ್ರ ಏಳು ದಯಾಗುಣಸಾಂದ್ರ
ಏಳು ವೈಷ್ಣವ ಕುಮುದಕೆಚಂದ್ರ ಶ್ರೀ ರಾಘವೇಂದ್ರ ಅ.ಪ.

ಅಶನ ವಸನಗಳಿಲ್ಲವೆಂಬ ವ್ಯಸನಗಳಿಲ್ಲ
ಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲ
ಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹ
ವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ 1
ನಾನು ನನ್ನದು ಎಂದು ಹೀನಮನಸಿಗೆ ತಂದು
ಏನು ಮಾಡುವ ಕರ್ಮ ನಾನೆ ಅಹುದೆಂದು
ನಾನೊಂದು ಸ್ವಾಮಿಕರ್ತೃತ್ವವನು ತಿಳಿಯಲಿಲ್ಲ 
ನೀನೆ ಉದ್ಧರಿಸಯ್ಯ ದೀನ ದಯಾಸಿಂಧು 2
ಅನ್ಯರ ಕೈಯಲ್ಲಿ ನಿನ್ನವರನಿರಿಸುವುದು 
ಅನ್ಯಾಯವಾಯ್ತು ಪಾವನ್ನ ಗುರುರಾಯ
ಎನ್ನ ಮಾತಲ್ಲವಿದು ನಿನ್ನ ಮಾತೆ ಸರಿ
ಮನ್ನಿಸಿ ಸಲಹು ಪ್ರಸನ್ನ ಗುರುರಾಯ 3
ವೇದ ಶಾಸ್ತ್ತ್ರಗಳನು ಓದಿ ಪೇಳ್ದವನಲ್ಲ
ಭೇದಾಭೇದವನು ತಿಳಿಯಲಿಲ್ಲ
ಸಾಧು ಸಜ್ಜನರ ಸಹವಾಸ ಮೊದಲಿಲ್ಲ
ಹಿಂದಾಗಿ ಮಾನ ಮಾರಿಸಿದಿ ಉಳಿಸಲಿಲ್ಲ 4
ಆಸೆಗೊಳಗಾದೆನೊ ಹೇಸಿ ಮನುಜನು ನಾನು
ಕ್ಲೇಶ ಭವಸಾಗರದೊಳೀಸುತಿಹೆನೊ
ಏಸು ಜನ್ಮದಿ ಎನ್ನ ಘಾಸಿ ಮಾಡಿದಿ ಮುನ್ನ
ದಾಸನಾಗುವೆ ತೋರೊ ಪ್ರಸನ್ನವೆಂಕಟನ 5
***

ರಾಗ: ಭೂಪಾಳಿ/ಉದಯ ತಾಳ: ಝಂಪೆ (raga tala may differ in audio)

Elu sri gururaya belagayitindu
Dhulidarusanava kodiri I vele sishyarige || pa ||

Elu gururagavendra-elu dayagunasandra
Elu vaishnava kumudake candra sri ragavendra || a ||

Asana vasanagalillavenba vyasanagalilla
Musuku haki mosadele mohisidenalla
Asurariya smarisade pasuvinavolu I deha
Vasumatiyolu bahalhasagettitalla. || 1 ||

Nanu nannadu endu hina manasige tandu
Enu maduva karma nane ahudendu
Svami kartrutvavanu tiliyalilla nanendu
Nine udhdharisayya dinadayasindho || 2 ||

Anyarakaiyali ninnavaranirisuvudu
Anyayavaytu pavanna gururaya
Enna matallavidu ninna mate sari
Mannisi salahu prasanna gururaya || 3 ||

Vedasastragalanu Odi peldavanalla
Bedabedavanu tiliyalilla
Sadhusajjana sahavasa modalilla
Hinagi mana marisidi ulisalilla || 4 ||

Asegolagadeno hesi manujanu nanu
Klesa bavasagaradolagisutiheno
Esujanmadi ennagasi madidi munna
Dasanaguve toro prasanna venkatana||5||
***


ಏಳು ಶ್ರೀ ಗುರುರಾಯ ಬೆಳಗಾಯಿತಿ೦ದು
ಧೂಳಿದರುಶನವ ಕೊಡಿರಿ ಈ ವೇಳೆ ಶಿಷ್ಯರಿಗೆ        || ಪ ||
ಏಳು ಗುರುರಾಘವೇ೦ದ್ರ-ಏಳು ದಯಾಗುಣಸಾ೦ದ್ರ
ಏಳು ವೈಷ್ಣವ ಕುಮುದಕೆ ಚ೦ದ್ರ ಶ್ರೀ ರಾಘವೇ೦ದ್ರ    || ಅ ||

ಅಶನ ವಸನಗಳಿಲ್ಲವೆ೦ಬ ವ್ಯಸನಗಳಿಲ್ಲ
ಮುಸುಕು ಹಾಕಿ ಮೋಸದೆಲೆ ಮೋಹಿಸಿದೆನಲ್ಲ
ಅಸುರಾರಿಯ ಸ್ಮರಿಸದೆ ಪಶುವಿನವೊಲು ಈ ದೇಹ
ವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ.            || ೧ ||

ನಾನು ನನ್ನದು ಎ೦ದು ಹೀನ ಮನಸಿಗೆ ತ೦ದು
ಏನು ಮಾಡುವ ಕರ್ಮ ನಾನೇ ಅಹುದೆ೦ದು
ಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೆ೦ದು
ನೀನೆ ಉಧ್ಧರಿಸಯ್ಯ ದೀನದಯಾಸಿ೦ಧೋ    || ೨ ||

ಅನ್ಯರಕೈಯಲಿ ನಿನ್ನವರನಿರಿಸುವುದು
ಅನ್ಯಾಯವಾಯ್ತು ಪಾವನ್ನ ಗುರುರಾಯ
ಎನ್ನ ಮಾತಲ್ಲವಿದು ನಿನ್ನ ಮಾತೇ ಸರಿ
ಮನ್ನಿಸಿ ಸಲಹು ಪ್ರಸನ್ನ ಗುರುರಾಯ            || ೩ ||

ವೇದಶಾಸ್ತ್ರಗಳನು ಓದಿ ಪೇಳ್ದವನಲ್ಲ
ಭೇದಾಭೇದವನು ತಿಳಿಯಲಿಲ್ಲ
ಸಾಧುಸಜ್ಜನ ಸಹವಾಸ ಮೊದಲಿಲ್ಲ
ಹೀನಾಗಿ ಮಾನ ಮಾರಿಸಿದಿ ಉಳಿಸಲಿಲ್ಲ    || ೪ ||

ಆಶೆಗೊಳಗಾದೆನೊ ಹೇಸಿ ಮನುಜನು ನಾನು
ಕ್ಲೇಶ ಭವಸಾಗರದೊಳಗೀಸುತಿಹೆನೊ
ಏಸುಜನ್ಮದಿ ಎನ್ನಗಾಸಿ ಮಾಡಿದಿ ಮುನ್ನ
ದಾಸನಾಗುವೆ ತೋರೋ ಪ್ರಸನ್ನ ವೆ೦ಕಟನ
****