Showing posts with label ಜಯ ಜಯ ಜಯ ಶ್ರೀನಿವಾಸ ಜಯಾ ಶಾಂತಿ ಕೃತಿ ಮಾಯಾ ಶ್ರೀಶ prasannashreenivasa. Show all posts
Showing posts with label ಜಯ ಜಯ ಜಯ ಶ್ರೀನಿವಾಸ ಜಯಾ ಶಾಂತಿ ಕೃತಿ ಮಾಯಾ ಶ್ರೀಶ prasannashreenivasa. Show all posts

Thursday, 5 August 2021

ಜಯ ಜಯ ಜಯ ಶ್ರೀನಿವಾಸ ಜಯಾ ಶಾಂತಿ ಕೃತಿ ಮಾಯಾ ಶ್ರೀಶ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀನಿವಾಸ ಕಲ್ಯಾಣ

ಜಯ ಜಯ ಜಯ ಶ್ರೀನಿವಾಸ
ಜಯಾ ಶಾಂತಿ ಕೃತಿ ಮಾಯಾ ಶ್ರೀಶ
ಭಯಬಂಧಮೋಚಕ ಜೀಯ ಆಹ
ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ
ಮಂದಜಭವ ಸುರವೃಂದ ಸಂಸೇವ್ಯ ಜಯ ಪ

ಸುರಸರಿತ ತೀರದಿಂದ
ಸುರಮುನಿ ಭೃಗು ಬಂದು ನಿನ್ನ
ಪರಸಮರಹಿತನೆಂದರಿತ ಆಹ
ಸಿರಿಯು ನಿನ ಭಾವವನುಸರಿಸಿ ಬೇಗ
ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ 1
ಮೇರುಸುತನೆ ಹಾಟಕಾದ್ರಿ
ವೀರ ಭಕುತ ವೃಷಭಾದ್ರಿ
ಕೀರುತಿ ಇತ್ತಿ ತಂಜನೆಗೆ ಆಹ
ಸರೀಸೃಪಾವರಿಸಿದ ಸೌರಭ್ಯಗಿರಿಯಿದು
ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ 2
ನೀನಿದ್ದ ಸ್ಥಳವೇ ವೈಕುಂಠ
ನಿನಗಾರು ಸಮರುಂಟೆ ಶ್ರೀಶ
ದೀನ ಸುಜನರಿಗೆ ನಂಟ ಆಹ
ಧೇನು ಪಾಲ್ಗರೆಯಲು ಪಾಲಕ ಹೊಡೆಯಲು
ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ 3
ಏಳು 2ತಾಳದ ಉದ್ದ ರಕ್ತ
ತಾಳಲಾರದೆ ಬಿದ್ದ ಗೋಪ
ಚೋಳರಾಯಗೆ ಕೊಟ್ಟೆ ಶಾಪ ಆಹ
ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ
ಶೀಲ ಸುರರ ಗುರು ಚಿಕಿತ್ಸೆಯನೈದಿದೆ 4
ಸ್ವಗತ ಭೇದವಿಲ್ಲದಂಥ
ಸ್ವಚ್ಛ ಚಿತ್ಸುಖಮಯನಂತ
ಸ್ವಾನಿರ್ವಾಹಕ ವಿಶೇಷ ಆಹ
ಶ್ವೇತವರಾಹನ ಸಂವಾದದಿಂದಲಿ
ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು 5
ಸರಸ್ವತೀ ಸ್ವಾಮಿ ಪುಷ್ಕರಣಿ
ಸುರಮುನಿನರರಿಗೆ ಸ್ನಾನ
ಪರಸುಖಮಾರ್ಗ ಸೋಪಾನ ಆಹ
ಸುರತಟಿನ್ಯಾದಿ ಸುತೀರ್ಥಗಳೆಲ್ಲವು
ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ 6
ಆದಿಕಾರಣ ನಿನ್ನ 3ಲೀಲಾ
ಮೋದಸಂಭ್ರಮವನ್ನು ನೋಡೆ
ಕಾದುಕೊಂಡಿಹರು ಕೋವಿದರು ಆಹ
ಸಾಧು ಸಂಭಾವಿತ ಬಕುಳಾದೇವಿಯುಗೈದ
ಸ್ವಾದ ಭೋಜ್ಯವನುಂಬ ನಿತ್ಯ ಸಂತೃಪ್ತ 7
ಮಂಗಳ ಚಿನ್ಮಯ ರಂಗಾ -
ನಂಗನಯ್ಯನೆ ಮೋಹನಾಂಗ
ತುಂಗ ಮಹಿಮನೆ ಶುಭಾಂಗ ಆಹ
ಬಂಗಾರ ಕುದುರೆ ಮೇಲಂಗನೇರಲಿ 4ಬಂದ
ಶೃಂಗಾರವೇನೆಂಬೆ ಎಂದಿಗೂ ಸ್ವರಮಣ8
ತೋಂಡಮಾನ ರಾಯನಣ್ಣ
ಚಂಡಭೂಪನು ಆಕಾಶ
ಕಂಡನು ಕಮಲದೊಳ್ ಶಿಶುವ ಆಹ
ಅಂಡ ಅಖಿಳ ಕೋಟಿ ಅಸಮ ಈ ಶಿಶುವನ್ನು
ಹೆಂಡತಿ ಧರಣಿಯು ಕೊಂಡಳು ಮಗಳಾಗಿ 9
ಮೂಲೇಶ ನಿನ್ನಯ ರಾಣಿ
ಮೂಲಪ್ರಕೃತಿ ಗುಣಮಾನಿ
ಕೀಲಾಲಭವ ಭವ ತಾಯಿ ಆಹ
ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು
5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ 10
ಮಹಿದೇವಿ ಕಮಲವಾಸಿನಿಯು
ಬಹಿನೋಟಕ್ಕೆ ರಾಜಸುತೆಯು
ಬಹು ಚಿತ್ರ ಪುಷ್ಪವ ಕೊಯ್ಯೆ ಆಹ
ಮಹತಿಪಾಣಿಯು ಬಹು ವಯೋರೂಪದಲಿ ಬಂದು
ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ 11
ಹಾಟಕಗಿರಿಯಿಂದ ನೀನು
ಬೇಟೆಯಾಡುವ ರೂಪ ತಾಳಿ
ಘೋಟಕವೇರಿ ಸಂಭ್ರಮದಿ ಆಹ
ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ
ನಾಟಕವಾಡಿದ್ದು ಪಾಡಲರಿಯೆನೊ 12
ನಿತ್ಯನಿರ್ಮಲ ಅವಿಕಾರ
ಮತ್ರ್ಯರವೋಲು ನೀ 1ನಟಿಸೋ
ಕೃತ್ಯಗಳರಿವರು ಯಾರೋ ಆಹ
ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ
ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ 13
ಪೊಂದಿದೆ ಫುಲ್ಕಸೀ ರೂಪ
ಮಂಧಜಭವ ಶಿಶುವಾಗೆ
ನಂದಿನಿಧರ ಯಷ್ಟಿಯಾದ ಆಹ
ಮಂದಜಭವಾಂಡ ಗುಣಗುಲ್ಮ ಮಾಡಿ ನೀ
ಕಂಧರದಲಿ ಗುಂಜ ಕಂಬುಸರವ ತೊಟ್ಟೆ 14
ನಾರಾಯಣಪುರಿಯಲ್ಲಿ
ಮಾರನಯ್ಯನೆ ನಿನ್ನ ಸುಗುಣ
ವಾರಿಧಿ ಪೊಕ್ಕಳು ಪದುಮೆ ಆಹ
ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು
ಪರಿಪರಿ ಪರಿಹಾರ ಪರದು ನೋಡಿದರಾಗ 15
ಶುದ್ಧ ಸುಂದರ ಸುಖಕಾಯ
ವೃದ್ಧ ಫುಲ್ಕಸೀ ವೇಷಧಾರಿ
ಬದ್ಧ ಶೋಕರ ಬಳಿ ಪೋದೆ ಆಹ
ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ
ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ 16
ವಹಿಸಿ ನಿನ ಶಾಸನ ಬಕುಳ
ಮಹದೇವನಾಲಯದಿಂದ
ಮಹಿಳೆಯರ ಸಹ ಕೂಡಿ ಆಹ
ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ
ಬಹು ಶುಭವಾರ್ತೆಯ ತಂದು ಪೇಳಿದಳೊ 17
ಶುಕಮುನಿ ಕರಪ್ರದವಾದ
ಆಕಾಶ ನೃಪ ಲಗ್ನಪತ್ರ
ಸ್ವೀಕರಿಸಿದೆ ಬಹು ಹಿತದಿ ಆಹ
ವಾಗೀಶ ಶಶಿಧರ ನಾಗೇಶ ಸೌಪರ್ಣ
ನಾಕೀಶ ಮೊದಲಾದ ಸುರರನು ಕರೆದೆ 18
ಶಿಷ್ಟ ಸನ್ಮುನಿಜನ ಕೂಟ
ತುಷ್ಟ ಸುಮನಸ ಸಮೂಹ
ಶ್ರೇಷ್ಠಸುಗಂಧಿ ಆಗಮನ ಆಹ
ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ
ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ 19
ಮಾಯ ಜಯೇಶ ಶ್ರೀವತ್ಸ
ಛಾಯೇಶಗುಪಾಯ ಪೇಳಿ
ತೋಯಜೆಯನು ಕರೆತಂದೆ ಆಹ
ಮಾಯಾ ಜಯಾ ಸಿರಿ ಕೃತಿ ಕಾಂತಿ ನಿನ್ನಿಂದ
ವಿಯೋಗರಹಿತರು ಎಂದೂ ಎಲ್ಲೆಲ್ಲೂ 20
ಬೃಹದಣುವಿಗೆ ಸತ್ತಾಪ್ರದನೆ
ಸುಹೃದ ಸಂತೃಪ್ತ ಮುಖಾಬ್ಧೇ
ದೃಢವ್ರತ ಶುಕಮುನಿಗೊಲಿದೆ ಆಹ
ಬೃಹತೀ ಫಲಾನ್ನವನುಂಡು ಫೂತ್ಕಾರದಿ
ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ 21
ಸುಜನರಿಗಾನಂದ ದಾತ
ದ್ವಿಜರೂಢ ಜಗದೀಶ ನೀನು
ಅಜಸುರರೊಡಗೂಡಿ ಬರೆ ಆಹ
ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ
ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ 22
ಅಜರ ಮಂದಿರ ಪೋಲ್ವ ಮನೆಯು
ಪ್ರಜುವಲಿಸುವ ದಿವ್ಯ ಸಭೆಯು
ನಿಜಭಕ್ತ ಪುರುಜನ ಗುಂಪು ಆಹ
ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ
ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ 23
ಸುರಮುನಿಜನ ಮೂರು ವಿಧಕೆ
ತರತಮ ಯೋಗ್ಯತೆ ಆರಿತು
ಪರಿಪರಿ ಸಾಧನವಿತ್ತೆ ಆಹ
ನೀರರುಹಜಾಂಡವು ನಿನ್ನಾಧೀನವು
ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ 24
ನೀ ನಿಂತು ನುಡಿಸಿದೀ ನುಡಿಯು
ನಿನ್ನಡಿಗಳಿಗೆ ಅರ್ಪಣೆಯು
ಚನ್ನಮಾರುತ ಮನೋಗತನೆ ಆಹ
ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ
ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25
***