Showing posts with label ಏಕೆ ನಿರ್ದಯನಾದೆ ಎಲೋ ದೇವನೇ ಶ್ರೀಕಾಂತ purandara vittala EKE NIRDAYANAADE ELO DEVANE SRIKAANTA. Show all posts
Showing posts with label ಏಕೆ ನಿರ್ದಯನಾದೆ ಎಲೋ ದೇವನೇ ಶ್ರೀಕಾಂತ purandara vittala EKE NIRDAYANAADE ELO DEVANE SRIKAANTA. Show all posts

Wednesday, 4 December 2019

ಏಕೆ ನಿರ್ದಯನಾದೆ ಎಲೋ ದೇವನೇ ಶ್ರೀಕಾಂತ purandara vittala EKE NIRDAYANAADE ELO DEVANE SRIKAANTA

ಪುರಂದರದಾಸರು
ಏಕೆ ನಿರ್ದಯನಾದೆ ಎಲೋ ದೇವನೇ
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ಪ

ಕಂಗೆಟ್ಟು ಕಂಬವನು ಒಡೆದು ಬಯಲಿಗೆ ಬಂದುಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆಬಂಗಾರವೆಷ್ಟು ಕೊಟ್ಟನು ಹೇಳೋ ಹರಿಯೇ 1

ಸಿರಿಗೆ ಪೇಳದೆ ಮುನ್ನ ಸೆರಗ ಸಂವರಿಸದೆಗರುಡನ ಮೇಲೆ ಗಮನವಾಗದೆ ||ಭರದಿಂದ ನೀ ಬಂದು ಕರಿಯನುದ್ದರಿಸಿದೆಕರಿರಾಜನೇನು ಕೊಟ್ಟನು ಹೇಳು ಹರಿಯೇ 2

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆನಿಜದಿ ರುಕ್ಮಾಂಗದ ಮೊಮ್ಮಗನೆ ||ಭಜನೆಗೈವರೆ ಹಿತರೆ ನಾ ನಿನಗನ್ಯನೆತ್ರಿಜಗಪತಿ ಸಲಹೆನ್ನಪುರಂದರವಿಠಲ3
*******