ರಾಗ ಆರಭಿ ತಿಶ್ರನಡೆ
ಶ್ರೀಗೋಪಾಲದಾಸಾರ್ಯ ವಿರಚಿತ
ಶ್ರೀಕೃಷ್ಣ ಸ್ತೋತ್ರ - ರಾಸಕ್ರೀಡಾ
ಜಯತು ಜಗದಾಧಾರ ಜಯತು ದೋಷವಿದೂರ
ಜಯತು ಶ್ರೀರಂಗಯನ್ನಂತರಂಗ॥ಪ॥
ಸುಂದರ ಮುಕುಟ ಮುತ್ತಿನ ಝೆಲ್ಲಿ ತುರುಬು ಅರ-
ವಿಂದ ಮುಖನಯನ ಕಸ್ತೂರಿತಿಲಕಾ
ಕುಂದ ಕುಟ್ಮಲದಂತೆ ಮಂದಹಾಸವದನ
ಚಂದದ ಕರ್ಣಕುಂಡಲ ಪ್ರಭೆಯ॥೧॥
ಇಂದಿರಾಲಯ ವಕ್ಷ ತುಲಸಿ ಮಾಲಾ ಸಿರಿ
ಗಂಧ ಕೌಸ್ತುಭಾಭರಣ ಭೂಷಿತಾ
ಕಂದರವು ಕಂಬುಗ್ರೀವ ಭುಜ ಕೀರ್ತಿ ತೋ-
ಳ್ಬಂದಿ ಹಸ್ತದ ಕರಿಯ ಕಂಕಣಾ॥೨॥
ಗುಂಭ ಸುಳಿ ಪೊಕ್ಕಳು ಉದರತ್ರಿವಳಿಯು ಪೀ-
ತಾಂಬರ ಕಟಿಯ ವಡ್ಯಾಣ ಚಲುವಾ
ಸ್ತಂಭ ಉರುಟು ಕದಳಿ ಊರು ಜಾನುಜಂಘೆ
ಗಂಭೀರ ಚರಣದಂದಿಗೆಯನ್ನ॥೩॥
ಗೋಪಿಯರ ಪೂರ್ವದಾನೋಂಪಿ ಪುಣ್ಯದ ಫಲವೋ
ತಾ ಪ್ರೇಮದಿಂದ ಪೂರೈಪೆನೆಂದು
ಶ್ರೀಪತಿ ಅನೇಕ ರೂಪನಾಗಿ ನಿಂದು
ಗೋಪತಿ ರಾಸಕ್ರೀಡೆಗೆ ತೊಡಕಿದ್ದು॥೪॥
ಮಧು ಕುಂಜವನದಲ್ಲಿ ಚದುರಿಯರ ಬೆರೆದಿನ್ನು
ಮದನನಯ್ಯನು ನಿಂದ ಮಂಡಲದಂತೆ
ಮದಿರಾಕ್ಷಿಯರ ಮನದ ಹದನವರಿತಾ ಕೊಳಲ
ವಿಧಿಸಿ ಊದಿದನಾಗ ವಿಧಿಯ ಜನಕಾ॥೫॥
ಕೆಳದಿಯರ ಮುಖ ವಿಕಸಿತವುಕ್ಕಿ ಕೃಷ್ಣ ತ-
ಮ್ಮೊಳಗಾದನೆಂದು ತಿಳಿದರು ಹರುಷದಿ
ಬಳಿಯಲೊಬ್ಬಳನು ನಿಲಿಸಿ ಹೆಗಲಲಿ ಕರವ
ತಳುಕು ಹಾಕಿ ಕುಣಿಯ ಕುಳಿತ ಕೃಷ್ಣಾ॥೬॥
ಲಲನೆಯರು ಕರತಳದಲ್ಲಿ ಕರವೆನೆಯಿಟ್ಟು
ನಿಲಿಸಿ ಪಾಡುತಲಿ ಸರಿಗಮದಿಂದಲಿ
ತುಳಿದಲ್ಲೆ ಕೃಷ್ಣನಾ ಸ್ಥಳದಲ್ಲೇ ಹೆಜ್ಜೆ-
ಯೊಳ್ನಿಲಿಸಿ ಕೃಷ್ಣನೊಳು ಆಡೋರು॥೭॥
ಬಳಲಿಸದೆ ಬೆವರನೆಲೆಗಳ ನಳನಳಿಸುತ
ಸುಳಿಸಿ ಮಂದವಾಯು ಕೆಳದಿಯರಿಗೆ
ಮಲಕು ಬಿಡಿಸಿ ಹಾರ ತುಳುಕುವನು ಕುಚಗಳ
ಸಲಿಸುವನು ಅವರವರ ಚೆಂದುಟಿಗಳ॥೮॥
ಘಿಲುಕು ಘಿಲುಕು ತಾಳಗತಿಗಳಿಂದಲಿಸುತ್ತ
ತಾಳ ಹಾಕಿ ಅಂಗನಾಮಾಂಗನೆಂದು
ನಿಲಿಸದೆ ಆಡುವಾ ಕಳೆವುಕ್ಕಿ ಅಂಬರದಿ
ನಿಲಿಸಿ ಅಜ ಭವ ಸುರರುಗಳು ನೋಳ್ಪರು॥೯॥
ದುಂದುಭಿವಾದ್ಯ ತನ್ನಿಂದ ತಾ ಬಾರಿಪವು
ಗಂಧರ್ವರು ಗಾಯನಗಳ ಮಾಡೆ
ಮಂದಾರ ಮಲ್ಲಿಗೆಯ ತಂದು ಪುಷ್ಪವು ಸುರರು
ಚಂದದಿಂದಲಿ ವೃಷ್ಟಿಯ ಕೆರೆದರು॥೧೦॥
ಒಂದು ಒಂದಶದಿಂದಲಿ ಅಜಭವರೆಲ್ಲಾ
ತಂದು ಇಟ್ಟರು ಉಡುಗೊರೆಗಳನೆಲ್ಲಾ
ಇಂದುಮುಖಿಯರ ಮನದಾನಂದ ಪೂರ್ತಿಸಿದನು
ಚಂದ ಚಂದದಲಿನ್ನು ಇಂದಿರೇಶಾ॥೧೧॥
ಶರಣು ಕರುಣಾನಿಧಿಯೇ ಶರಣು ಗುಣವಾರಿಧಿಯೇ
ಶರಣು ಶರಣರ ಹೊರವಾ ಸುರರ ಮಣಿಯೇ
ಶರಣು ನಾ ನಿನ್ನವರ ಚರಣ ಸೇವಕ ನಾನು
ಶರಣು ಗೋವಳಾ ಗೋಪಿಯರ ಪಾಲಕಾ॥೧೨॥
ರಾಸಕ್ರೀಡೆಯಲಿ ಸೋಲಿಸಿ ಗೋಪಿಯರ ಅಭಿ-
ಲಾಷೆ ಪೂರ್ತಿಸಿದಾ ಭಾಸುರ ಮೂರುತಿ
ಪೋಷಿಸುಯೆನ್ನ ಗೋಪಾಲವಿಠಲ ವಿಜಯ
ದಾಸರ ಆಸರದಿ ಇಟ್ಟುಯನ್ನಾ॥೧೩॥
https://drive.google.com/file/d/1wYeNS4bek1WZpgshMfYaqW35EsOkK50R/view?usp=drivesdk
***
ಇಭರಾಮಪುರ ಭಾರತೀಶಾಚಾರ್ಯ ವಿರಚಿತ ಗುರುಸ್ತೋತ್ರಂ
गुरुस्तोत्रं
तपोज्ञानादिभिर्युक्तं मूलरामसुतप्रियम् ।
सुबुधेन्द्रगुरुं वन्दे सदा विद्यार्थिवत्सलम् ।।
गोसेवाविषये तावत् प्रथितं प्रथमं यतिम् ।
सुबुधेन्द्रगुरुं वन्दे सदा विद्यार्थिवत्सलम् ।।
सर्वभाषाप्रवीणं तं सद्विद्याबोधकं यतिम् ।
सुबुधेन्द्रगुरुं वन्दे सदा विद्यार्थिवत्सलम् ।।
सच्छास्त्रार्णवमज्जितो यतिवरो यो संप्रसिद्धो भुवि
यो विद्वद्वरवन्दितो हि सततं शास्त्रार्थसंरक्षकम् ।
श्रीमन्न्यायसुधादिशास्त्रमखिलं शिष्याय संपाठयन्
तं वन्दे सुबुधेन्द्रतीर्थव्रतिनं विद्यासमुद्रं गुरुम् ।।
https://drive.google.com/file/d/1wenLsv-rDqEFs95PXxXKt3Ck4O1300ir/view?usp=drivesdk