Showing posts with label ಶರಣು ಶ್ರೀನಿವಾಸ ಪಾಲಿಸು ಶರಣ govinda. Show all posts
Showing posts with label ಶರಣು ಶ್ರೀನಿವಾಸ ಪಾಲಿಸು ಶರಣ govinda. Show all posts

Sunday, 17 November 2019

ಶರಣು ಶ್ರೀನಿವಾಸ ಪಾಲಿಸು ಶರಣ ankita govinda

by ಗೋವಿಂದದಾಸ
ಶರಣು ಶ್ರೀನಿವಾಸ | ಪಾಲಿಸು |ಶರಣ ಜನರ ಪೋಷಾರಿ ಪ

ಕರುಣದಿ ನಿನ್ನಯ ಚರಣವ ನಂಬಿದ |ಶರಣನಭವಭಯ ದುರಿತವ ಕಳೆಯುವಅ.ಪ

ನಂಬಿದವರ ಪೊರೆವಾ | ಭಕ್ತ ಕು | ಟುಂಬಿ ವಾಸುದೇವಾ |ಕಂಬುಕಂಧರಕಮ | ಲಾಂಭಕ ಶ್ರೀವರಶಂಭು ಸಖನೆ | ಶುಕ್ಲಾಂಬರಧರಹರಿ||ಶರಣು||1

ಪದ್ಮನಾಭಎನ್ನ | ಪಾಲಿಸು | ಪದ್ಮಾವತಿರಮಣಾ |ಪದ್ಮನಯನ ಮುಖ | ಪದ್ಮವ ತೋರಿಸುಪದ್ಮೋದ್ಭವನುತ | ಪದ್ಮಮಾಲಾಧರ ||ಶರಣು||2

ತಿರುಪತಿ ಗಿರಿವಾಸಾ |ಕಾಣಿಕೆ| ಬರಲತಿ ಸಂತೋಷಾ |ಪರಿಪರಿ ವಿಧದಲಿ | ಹರಕೆಯ ತರಿಸುವ |ಉರಗಶಯನ ಗೋ | ವಿಂದನೆ ಶ್ರೀಹರಿ ||ಶರಣು||3
*******