..
kruti by ಬೇಲೂರು ವೈಕುಂಠ ದಾಸರು belur vaikunta dasaru
ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ
ಬಾಳುವ ಮಗನನು ಕೋಳುವಿಡಿದುದು ಯಮನ
ನಾಳಿದೊಡೆಯ ವೇಲಾಪುರದರಸಾ ಪ
ಪತಿಯನು ನೀಗಿದ ಸತಿಮಾದಮ್ಮನು
ಸುತನಿಂ ಬದುಕುವೆನೆಂದೀ ಊರೊಳು
ಅತಿ ತಿರಿತಂದೋವುತಲಿದ್ದಳು ಸುತ
ಮೃತನಾದನು ಅಚ್ಯುತ ಸಲಹಯ್ಯಾ 1
ಉರಿಯೊಳು ಬಿದ್ದಂತೊರಲಿ ಪೊರಲಿ ವೋ
ಹರಿ ಹರಿ ಹರಿ ಯೆಂದುರುಳಿ ಬಡಿದುಕೊಳ್ಳೇ
ದುರಿಯಶ ವೊಡೆಯಗೆ ಬರುವುದೆಂದು ನರ
ಹರಿ ರಕ್ಷಿಪನೆಂದೊರೆದೆನು ಹರಿಯೆ 2
ಸತ್ತಮಗನ ನೀ ತಂದಿತ್ತುದಿಲ್ಲವೇ ಹೇ
ಕತರ್ುೃವೆ ಸಾಂದೀಪೋತ್ತಮನಿಗೆ ಅಂದು
ಉತ್ತರೆಯೊಡಲೊಳು ಅತ್ತು ಶಿಶುವು ಸಾ
ವುತ್ತಿರಲುಳುಹಿದೆ ಚಿತ್ತಜನಯ್ಯಾ 3
ಇರಿದಪಮೃತ್ಯು ಪೊತ್ತಿರಿದಪವಾದವು
ಉರುಳಿದೆ ನೋಡುತ್ತಿರುವರೆ ಸುಮ್ಮನೆ
ಅರಿಯದಂತಿರ್ದಡೆ ಪರಿಪಾಲಿಪರಾರು
ವರಮೃತ್ಯುಂಜಯ ಕರುಣಾಕರನೇ 4
ಮರಣವನೈದಿದ ತರಳ ನಂಜುಂಡನ
ಕರುಣಿಸದಿರ್ದಡೆ ಶಿರವನರಿದು ನಾ
ಚರಣದೊಳಿಡುವೆನು ದುರಿತಬಾಹುದು ನಿನ
ಗರಿಯದೆ ವೈಕುಂಠವಿಠಲ ಚೆನ್ನಿಗನೇ 5
***