Showing posts with label ಮಂಗಳಾಂಗ ವಟ್ಟದಲ್ಲನಂಗ purandara vittala ankita suladi ವೇಂಕಟೇಶ ಮಹಿಮಾ ಸುಳಾದಿ MANGALANGA PATTADALLANANGA VENKATESHA MAHIMA SULADI. Show all posts
Showing posts with label ಮಂಗಳಾಂಗ ವಟ್ಟದಲ್ಲನಂಗ purandara vittala ankita suladi ವೇಂಕಟೇಶ ಮಹಿಮಾ ಸುಳಾದಿ MANGALANGA PATTADALLANANGA VENKATESHA MAHIMA SULADI. Show all posts

Sunday, 7 February 2021

ಮಂಗಳಾಂಗ ವಟ್ಟದಲ್ಲನಂಗ purandara vittala ankita suladi ವೇಂಕಟೇಶ ಮಹಿಮಾ ಸುಳಾದಿ MANGALANGA PATTADALLANANGA VENKATESHA MAHIMA SULADI


Audio by Mrs. Nandini Sripad

ಶ್ರೀ ಪುರಂದರದಾಸಾರ್ಯ ವಿರಚಿತ ಶ್ರೀವೇಂಕಟೇಶ ದೇವರ ಮಹಿಮಾ ಸುಳಾದಿ 


 ರಾಗ ಮೋಹನ 


 ಧ್ರುವತಾಳ 


ಮಂಗಳಾಂಗ ವಟ್ಟದಲ್ಲನಂಗ ಸುಖವಿತ್ತಳವ್ವೆ

ಅಂಗನೆ ಲಕುಮೆವ್ವೆ ತುಂಬುರ ದೊಳಿಪ್ಪಳವ್ವೆ

ಶೃಂಗಾರವಾದಳವ್ವೆ ಬಂಗಾರವಾದಳವ್ವೆ

ರಂಗ ಪುರಂದರವಿಟ್ಠಲ ವಿಭುದೇಶ ತಿರು -

ವೆಂಗಳಪ್ಪ ಎನ್ನಪ್ಪನೆ ನಾರಾಯಣಾ ॥ 1 ॥ 


 ಮಟ್ಟತಾಳ 


ಉಟ್ಟ ದಟ್ಟಿ ಕಟ್ಟಿದ ಕಠಾರಿ

ತೊಟ್ಟಂಬು ತೊಡರು ತೋಮರ

ಮೆಟ್ಟಿದ್ದ ಹೆಕ್ಕಟ್ಟಿ ಗೆರೆ ಹೊನ್ನ ಗೆಜ್ಜೆ

ಕಟ್ಟಾಳು ತಾ ಆಳು ಯೆಟ್ಟಿವರಿವಲ್ಲಿ

ಸೃಷ್ಟಿ ರಕ್ಷಿಪ ಪುರಂದರ

ವಿಟ್ಠಲ ತಿರುವೆಂಗಳಪ್ಪನೇ ಆದಾ ॥ 2 ॥ 


 ಅಟ್ಟತಾಳ 


ಆಚ್ಯುತಾನಂತ ಗೋವಿಂದ ಮುಕುಂದ

ವಾಮನ ವಾಸುದೇವ ನಾರಾಯಣ

ಸಚ್ಚಿದಾನಂದ ಸ್ವರೂಪ ಗೋಪಾಲ

ಪುರುಷೋತ್ತಮ ಪರಂಧಾಮ ನಾರಾಯಣ

ಮತ್ಸ್ಯ ಕೂರುಮ ವರಾಹ ನಾರಸಿಂಹ ವಾಮನ

ಭಾರ್ಗವ ರಾಘವ ಕೃಷ್ಣ ಬುದ್ಧ ಕಲ್ಕಿಯವತಾರ

ಅನಂತಾವತಾರ ನಾರಾಯಣಾ

ಅಪಾರಮಹಿಮನೆ ನಾರಾಯಣ

ಸರ್ಪಶಯನನೆ ನಾರಾಯಣ

 ಶ್ರೀಪುರಂದರವಿಟ್ಠಲ ವಿಭುದೇಶ ತಿರುವೆಂಗಳಪ್ಪ

ಎನ್ನಪ್ಪನೆ ನಾರಾಯಣ ಅಚ್ಯುತಾನಂತ ಗೋವಿಂದ ॥ 3 ॥ 


 ಝಂಪೆತಾಳ 


ಇದೇ ದನುಜಮರ್ದನ ಚಕ್ರಹಸ್ತ

ಇದೇ ವೇದಮಯ ಶಂಖಹಸ್ತ

ಇದೇ ಜಘನದೊಳಿಪ್ಪ ಅಮೃತಹಸ್ತ

ಇದೇ ವೈಕುಂಠವೆಂದು ತೋರುವ ಹಸ್ತ

ಇದೇ ಪುರಂದರವಿಟ್ಠಲನ್ನ ಮೂರುತಿ

ಇದೇ ತಿರುವೆಂಗಳಪ್ಪನ ಇರುವು ॥ 4 ॥ 


 ಏಕತಾಳ 


ಕಿರೀಟ ಕುಂಡಲಧರನ್ನ ಕಂಡೆ

ವರಮಣಿ ಭೂಷಣನ್ನ ಕಂಡೆ

ಸಿರಿಯಿಪ್ಪ ವಕ್ಷಸ್ಥಳವನ್ನ ಕಂಡೆ

ವರಾಂಬರನ್ನ ಕಂಡೆ ವರದೇಶನ್ನ ಕಂಡೆ

 ಪುರಂದರವಿಟ್ಠಲರೇಯನ ಚಲುವ

ತಿರುವೆಂಗಳಪ್ಪನ ಇರುವು ಕಂಡೆ ॥ 5 ॥ 


 ಜತೆ 


 ಪುರಂದರವಿಟ್ಠಲ ವಿಭುದೇಶ

ತಿರುವೆಂಗಳಪ್ಪ ಎನ್ನಪ್ಪನೆ ಆದಾ ॥

*******