ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ಶ್ರೀಗುರು ಅವಧೂತ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಸದ್ಗುರು ದೀನನಾಥ pa
ತಪ್ಪು ಕ್ಷಮೆಯ ಮಾಡೊನೀ ಸ್ವಾಮಿ ನಮ್ಮ ಕೃಪಾಸಿಂಧು ಸದ್ಗುರು ಪರಬ್ರಹ್ಮ ಪಾಪಿ ದುರಾಚಾರಿಯು ನಾಪರಮ ಕೃಪೆಯಿಂದ ಕಾವದು ದಯನಿಮ್ಮ 1
ಗುಣದೋಷ ನೋಡದಿರೊ ಶ್ರೀಹರಿ ದುರಿತ ಕೋಟಿಗಳ ಸಂಹಾರಿ ನೀನಹುದೊ ಬಡವನಾಧಾರಿ ಅನುದಿನ ಕಾಯೊ ನೀ ಪರೋಪರಿ 2
ಒಮ್ಮೆ ಬಂಧನವ ಬಿಡಿಸೊ ಸಮ್ಯಕ ಙÁ್ಞನ ಸಾರದೊಳು ಕೂಡಿಸೊ ನಿಮ್ಮದಾಸ ಮಹಿಪತಿಯೆಂದೆನಿಸೊಬ್ರಹ್ಮಾನಂದದೊಳು ನಲಿದಾಡಿಸೊ 3
****