Wednesday, 1 September 2021

ತ್ರಾಹಿ ತ್ರಾಹಿ ಶ್ರೀಗುರು ಅವಧೂತ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಸದ್ಗುರು ದೀನನಾಥ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ತ್ರಾಹಿ ತ್ರಾಹಿ ಶ್ರೀಗುರು ಅವಧೂತ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಸದ್ಗುರು ದೀನನಾಥ pa


ತಪ್ಪು ಕ್ಷಮೆಯ ಮಾಡೊನೀ ಸ್ವಾಮಿ ನಮ್ಮ ಕೃಪಾಸಿಂಧು ಸದ್ಗುರು ಪರಬ್ರಹ್ಮ ಪಾಪಿ ದುರಾಚಾರಿಯು ನಾಪರಮ ಕೃಪೆಯಿಂದ ಕಾವದು ದಯನಿಮ್ಮ 1 

ಗುಣದೋಷ ನೋಡದಿರೊ ಶ್ರೀಹರಿ ದುರಿತ ಕೋಟಿಗಳ ಸಂಹಾರಿ ನೀನಹುದೊ ಬಡವನಾಧಾರಿ ಅನುದಿನ ಕಾಯೊ ನೀ ಪರೋಪರಿ 2 

ಒಮ್ಮೆ ಬಂಧನವ ಬಿಡಿಸೊ ಸಮ್ಯಕ ಙÁ್ಞನ ಸಾರದೊಳು ಕೂಡಿಸೊ ನಿಮ್ಮದಾಸ ಮಹಿಪತಿಯೆಂದೆನಿಸೊಬ್ರಹ್ಮಾನಂದದೊಳು ನಲಿದಾಡಿಸೊ 3

****


No comments:

Post a Comment