Showing posts with label ಸದ್ಗುರುವಿಗೆ ನಾನೇನು ಮಾಡಿ ಉದ್ಧಾರಾಗುವೆ ನಾನಿನ್ನುದ್ಧಾರಾಗುವೆ bheemashankara. Show all posts
Showing posts with label ಸದ್ಗುರುವಿಗೆ ನಾನೇನು ಮಾಡಿ ಉದ್ಧಾರಾಗುವೆ ನಾನಿನ್ನುದ್ಧಾರಾಗುವೆ bheemashankara. Show all posts

Friday, 6 August 2021

ಸದ್ಗುರುವಿಗೆ ನಾನೇನು ಮಾಡಿ ಉದ್ಧಾರಾಗುವೆ ನಾನಿನ್ನುದ್ಧಾರಾಗುವೆ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara

ಸದ್ಗುರುವಿಗೆ ನಾನೇನು ಮಾಡಿ ಉದ್ಧಾರಾಗುವೆ | ನಾನಿನ್ನುದ್ಧಾರಾಗುವೆ | ದೇಹಾತೀತನಾಗಿ ಚರಣಕಮಲಕ್ಕೆರಗುವೆ ಪ

ತಾರಕ ಮಂತ್ರ ಉಪದೇಶ ಕರ್ಣದೊಳಿಟ್ಟಾ ಸದ್ಗುರುಕರ್ಣದೊಳಿಟ್ಟಾ | ಮಾಯಾ ಮೋಹದ ಬೇಡಿ ಕಡಿದು |ಭ್ರಾಂತಿಯ ಸುಟ್ಟಾ 1

ನೆತ್ತಿಯ ಮ್ಯಾಲೆ ಕರವನಿಟ್ಟು ನಿಜವೇ ನೀನೆಂದಾ | ಅಂತರಂಗವ ತೋರಿಸಿಕೊಟ್ಟು ಭವ ಭಯ ಬಿಡಿಸಿದಾ 2

ಸದ್ಗುರುನಾಥಾ ಭೃಂಗವಳ್ಳಿವಾಸಾ ಆತನ ದಯದಿಂದ | ಸಗುಣರೂಪನಾಗಿ ಮೆರೆವ ಸಹಜಾನಂದಾ 3

***