Showing posts with label ಕಲಿಯುಗದ ಮಹಿಮೆಯನು ಕಾಣಬೇಕಿಂತು purandara vittala. Show all posts
Showing posts with label ಕಲಿಯುಗದ ಮಹಿಮೆಯನು ಕಾಣಬೇಕಿಂತು purandara vittala. Show all posts

Wednesday, 4 December 2019

ಕಲಿಯುಗದ ಮಹಿಮೆಯನು ಕಾಣಬೇಕಿಂತು purandara vittala

ರಾಗ ಕಾಂಭೋಜ ಝಂಪೆ ತಾಳ

ಕಲಿಯುಗದ ಮಹಿಮೆಯು ಕಾಣಬಂತೀಗ
ಜಲಜಾಕ್ಷ ಮೇಲ್ಗಿರಿಯ ಶ್ರೀವೆಂಕಟೇಶ ||ಪ||

ಹರಿಕಥೆಯನೆ ಬಿಟ್ಟು ಹೀನನುಡಿ ನುಡಿಯುವರು
ಗುರುಹಿರಿಯರ ದೂಷಿಸಲು ಎಣಿಸುವರು
ಪೊರೆದ ತಾಯ್ತಂದೆಗಳ ಮಾತುಗಳ ಮನ್ನಿಸದೆ
ತರುಣಿಯರ ನುಡಿಗೇಳಲಿಚ್ಛಿಸುತ್ತಿಹರು ||

ಪಟ್ಟದರಸಿಯ ಬಿಟ್ಟು ಪರಸತಿಯ ಬಯಸುವರು
ಕೊಟ್ಟ ಸಾಲವ ನುಂಗಿಕೊಳಲೆಣಿಪರು
ಮುಟ್ಟಿ ಭಾಷೆಯ ಕೊಟ್ಟು ಮೋಸವನೆ ಮಾಡುವರು
ಬಿಟ್ಟು ಪರದೈವವನು ಮಾರಿಗೆರಗುವರು ||

ಕಂಡುದನು ಹೇಳರು ಕಾಣದನೆ ಪೇಳುವರು
ಉಂಡ ಮನೆಗೆರಡನ್ನು ಬಗೆಯುತ್ತಲಿಹರು
ಕೊಂಡಾಡಿ ಬೇಡಿದರು ಕೊಡರೊಂದು ರುವ್ವಿಯನು
ದಂಡಿಸಿ ಕೇಳುವರಿಗೆ ಧನವ ಕೊಡುತಿಹರು ||

ಕಳ್ಳರೊಳು ಅತಿಸ್ನೇಹ ಸುಳ್ಳರೊಳು ಸೋಲುವರು
ಒಳ್ಳೆಯವರೊಡನೆ ವಂಚನೆಯ ಮಾಡುವರು
ಇಲ್ಲದ ಅನಾಥರಿಗೆ ಇಷ್ಟೊಂದನಿಕ್ಕರು
ಬಲ್ಲಿದಗೆ ಬಾಯಸವಿಯನುಣಿಸುವರು ||

ಮಾಡಿದುಪಕಾರವನು ಮರೆತುಕೊಂಬರು ಮತ್ತೆ
ಕೂಡಲೇ ಕಾದುವರು ಕಪಟತ್ವದಿಂದ
ರೂಢಿಯೊಳಗೆ ನಮ್ಮ ಪುರಂದರವಿಠಲನ್ನ
ಪಾಡಿಪೊಗಳುವರಿಗಿನ್ನಾರ ಭಯವಿಲ್ಲ ||
***


Kaliyugada mahimeyu kanabantigajalajaksha melgiriya srivenkatesha ||pa||


Harikatheyane bittu hinanudi nudiyuvaru
Guruhiriyara dushisalu enisuvaru
Poreda taytandegala matugala mannisade
Taruniyara nudigelaliccisuttiharu ||1||

Pattadarasiya bittu parasatiya bayasuvaru
Kotta salava nungikolaleniparu
Mutti basheya kottu mosavane maduvaru
Bittu paradaivavanu marigeraguvaru ||2||

Kandudanu helaru kanadane peluvaru
Unda manegeradannu bageyuttaliharu
Kondadi bedidaru kodarondu ruvviyanu
Dandisi keluvarige dhanava kodutiharu ||3||

Kallarolu atisneha sullarolu soluvaru
Olleyavarodane vanchaneya maduvaru
Illada anatharige ishtondanikkaru
Ballidage bayasaviyanunisuvaru ||4||

Madidupakaravanu maretukombaru matte
Kudale kaduvaru kapatatvadinda
Rudhiyolage namma puranmdaravithalanna
Padipogaluvariginnara Bayavilla ||5||
***

pallavi

kaliyugada mahimeyu kANa bandIga jalajAkSa mElgiriya shrI vEnkaTEsha

caraNam 1

harikatheyane biTTu hIna nuDi nuDiyuvaru guru hiriyarugaLa dUSisalu eNisuvaru
poreda tAi tandegaLa mAtugaLa mannisade taruNiyara nuDi kELalicchisuttiharu

caraNam 2

paTTadarasiya biTTu para satiya bayasuvaru koTTa sAlava nungi koLaleNiparu
muTTi bhASeya koTTu mOsavane mADuvaru biTTu para dAivavanu mAri keraguvanu

caraNam 3

kaNDudanu hELaru kANadane pELuvaru uNDa manageraDannu bageyuttaliharu
koNDADi bEDidaru koDarondu paisavanu daNDisi kELuvarige dhanava koDutiharu

caraNam 4

kaLLaroLu ati snEha suLLaroLu sOluvaru oLLeyavaroDane vancaneya mADuvaru
illada anAtharige iStondanikkaru ballidage balu bAya saviyanuNisuvaru

caraNam 5

mADidupakAravanu maretu kombaru matte koDale kAduvaru kapaTatvadinda
rUDhiyoLage namma purandara viTTalanna pADi pogaLuvariginnAra bayavilla
***

ಕಲಿಯುಗದ ಮಹಿಮೆಯನು ಕಾಣಬೇಕಿಂತು ||

.ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |
ಗುರುಹಿರಿಯರೊಳು ದೋಷವೆಣಿಸುತಿಹರು |
ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |
ತರುಣಿಯರ ನುಡಿಗಳನು ಲಾಲಿಸುತ್ತಿಹರು ||

ಕಂಡುದನೆ ಹೇಳರು ಕಾಣದನೆ ಹೇಳುವರು |
ಉಂಡ ಮನೆಗೆರಡನ್ನೆ ಎಣಿಸುತಿಹರು ||
ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |
ದಂಡಿಸುವರಿಂಗೆ ಧನಗಳನು ಕೊಡುತಿಹರು ||

ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |
ಒಳ್ಳೆಯವರೊಡನೆ ವಂಚನೆ ಮಾಳ್ಪರು ||
ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |
ಬಲ್ಲಿದವರಿಗೆ ಬಾಯ ಸವಿಯನುಣಿಸುವರು ||

ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |
ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||
ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |
ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು ||

ಮಾಡಿದುಪಕಾರವನು ಮರೆತುಕಳೆವರು ಮತ್ತೆ |
ಕೂಡಾಡಿ ಬೇಡುವರು ಕುಟಿಲತ್ವದಿಂದ ||
ರೂಢಿಗೊಡೆಯನು ನಮ್ಮ ಪುರಂದರವಿಠಲನ |
ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ ||
*******