Showing posts with label ಕಂಡೆ ಕಂಡೆ ಕೈಲಾಸ ನಿಲಯನ ankita govinda KANDE KANDE KAILAASA NILAYANA. Show all posts
Showing posts with label ಕಂಡೆ ಕಂಡೆ ಕೈಲಾಸ ನಿಲಯನ ankita govinda KANDE KANDE KAILAASA NILAYANA. Show all posts

Wednesday, 1 December 2021

ಕಂಡೆ ಕಂಡೆ ಕೈಲಾಸ ನಿಲಯನ ankita govinda KANDE KANDE KAILAASA NILAYANA



by ಗೋವಿಂದದಾಸ
ಕಂಡೆ ಕಂಡೆ ಕೈಲಾಸ ನಿಲಯನ |ಕಂಡೆ ಪಾರ್ವತಿಯ ಪ್ರಿಯ ಗಂಡನಾ ||ಕಂಡೆ ಕಂಡೆ ಕಾಲಾಗ್ನಿವಿಲಯನ |ಕಂಡೆ ಸರ್ವರೋದ್ದಂಡನಾ ಪ

ಅಂಗಜಾಂಗವನು | ಭಂಗಗೈದಭವ|ಭಂಗಹರನ ಭಸ್ಮಾಂಗನಾ ||ಮಂಗಳಾಂಗ ಭೂ |ತಂಗೊಳೊಡೆಯ ಸುರ | ಗಂಗಾಧರನ ಮಹಾಲಿಂಗನಾ 1

ಶಂಭು ಶಿವನ ಪಾ | ದಾಂಬುಜಯುಗಳವ |ನಂಬಿದೆನಂಬರ ಕೇಶನಾ ||ಡಂಬಹರನ ದಿ | ಗಂಬರ ಮೂರ್ತಿಯ |ಸಾಂಬಚಿದಂಬರವಾಸನಾ 2

ಪಂಚ ತುಂಡ ತ್ರಿ | ಪಂಚನೇತ್ರನಾ |ಪಂಚಭೂತಕಧಿನಾಥನಾ ||ಪಂಚಲಿಂಗ ಪಂಚಾಕ್ಷರ ಪ್ರೀಯನ |ಪಂಚಮೂರ್ತಿಯೊಳು ಖ್ಯಾತನಾ 3

ನಂದಿಸ್ವಾರಿ ಜಾ | ಲಂಧರಾಂತಕ |ಸುಂದರಾಂಗಶುಭಶೀಲನಾ ||ಅಂಧಕಾರಿ ಗೋವಿಂದನ ದಾಸನ
***