Showing posts with label ಇಂತಿರುವುದೇನು ಬಗೆ ರಾಮಾ pranesha vittala. Show all posts
Showing posts with label ಇಂತಿರುವುದೇನು ಬಗೆ ರಾಮಾ pranesha vittala. Show all posts

Friday, 8 November 2019

ಇಂತಿರುವುದೇನು ಬಗೆ ರಾಮಾ ankita pranesha vittala

by ಪ್ರಾಣೇಶದಾಸರು
ಇಂತಿರುವುದೇನು ಬಗೆ ರಾಮಾ |
ಹರಿಸ್ವ-ತಂತ್ರ ಶ್ರೀನಿಧಿಯೆಂದು ಪೊಗಳುತಿವೆ ವೇದ ಪ

ವಿಧಿಗೆ ಪದವಿತ್ತವನೇ ವನವ ಚರಿಸುವದೇನೋ |
ಪದುಮ ಸದನೆಯ ರಮಣ ಬಡವನಾಗಿಹದೇನೋ ||
ಮದನಜನಕನೆ ಋಷಿಗಳಂತೆ ಆಗುವದೇನೋ |
ಉದರದೊಳು ಬಹು ಜಗಗಳಿರಲೂ ಪತ್ರ ಸದನವಾಶ್ರಯಿಸಿ-
ಕೊಂಡಿರುವಿ ಇದು ಏನೋ 1

ನಿತ್ಯತೃಪ್ತನೆ ಶಬರಿಯೆಂಜಲುಂಬುವದೇನೋ |
ಉತ್ತಮ ವಿಹಗವಿರಲು ಕಾಲ್ನಡಿಗೆಯಿದೇನೋ ||
ಭೃತ್ಯರುದಿವಿಜರುನೀಂ ಚಾಪವ ಹೊರುವದೇನೋ |
ನಿತ್ಯಶ್ರೀ ಹೃದಯದೊಳಗಿರಲು ನಿನ್ನ ಪತ್ನಿ 
ಹೋದಳೆಂದುಚಿಂತಿಸುವದೇನೋ2

ಸ್ವಾಮಿ ಅಹಿಶಯನ ತೃಣಶಾಯಿಯಾಗುವದೇನೋ |
ಭೂಮಿ ನಿನ್ನೊಂದಂಘ್ರಿ ಸೇತು ಕಟ್ಟುವದೇನೋ ||
ಈ ಮರುಳು ರಕ್ಕಸರು ನಿನಗೊಂದೀದೇನೋ |
ತಾಮಸರ ಮೋಹಿಸುವದಕೆ, ಭಕ್ತ ಪ್ರೇಮ ಪ್ರಾಣೇಶ
ವಿಠ್ಠಲನೆಲೀಲೆಯೇನೋ3
********