Showing posts with label ಶ್ರೀವೆಂಕಟ ಶೈಲಾಧಿಪ jagannatha vittala. Show all posts
Showing posts with label ಶ್ರೀವೆಂಕಟ ಶೈಲಾಧಿಪ jagannatha vittala. Show all posts

Saturday, 14 December 2019

ಶ್ರೀವೆಂಕಟ ಶೈಲಾಧಿಪ ankita jagannatha vittala

ಜಗನ್ನಾಥದಾಸರು
ಶ್ರೀ ವೆಂಕಟ ಶೈಲಾಧಿಪ ನಮೋ ರಾ
ಜೀವಭವ ಭವಾರಾಧ್ಯ ನಮೋ ಪ

ಭೂವರಾಹಾದ್ಯವತಾರ ನಮೋ
ಕೇವಲ ನಿರ್ಗುಣ ಬೋಧಾನಂದ ಮಾ
ಯಾವತಾರತೇ ನಮೋ ನಮೋ
ಗೋವಿಂದ ಜಗಜ್ಜೀವನ ಜಿತ - ಮದ
ದೇವಕಿನಂದನ ದೇವ ನಮೋ 1

ಸ್ವಾಂತ ಧ್ವಾಂತ ನಿಕೃಂತನ ಕಮಲಾ
ಕಾಂತ ಶ್ರೀಮದನಂತ ನಮೋ
ಚಿಂತಿತ ಫಲದ ಮದಂತರ್ಯಾಮಿ ದು
ರಂತ ಶಕ್ತಿ ಜಯವಂತ ನಮೋ
ಸಂತತಾದಿಮಧ್ಯಾಂತ ವಿವರ್ಜಿತ
ನಂತಾಸನ ಕೃತಾಂತ ನಮೋ 2

ಕುಸ್ಥ ನಮೋ ಆಪಸ್ಥ ನಮೋ ತೇ
ಜಸ್ಥ ನಮೋ ವಾಯಸ್ಥ ನಮೋ
ಖಸ್ಥ ನಮೋ ಆಶಸ್ಥ ನಮೋ ಮ
ಧ್ಯಸ್ಥ ನಮೋ ನಮೋ ಸ್ವಸ್ಥ ನಮೋ
ಗೋಸ್ಥ ನಮೋ ಕಾಲಸ್ಥ ನಮೋ ದೇ
ವಸ್ಥ ನಮೋ ಸರ್ವಸ್ಥ ನಮೋ 3

ಶ್ರೀಶ ನಮೋ ಬ್ರಹ್ಮೇಶ ನಮೋ ಪ್ರಾ
ಣೇಶ ನಮೋ ವಾಣೀಶ ನಮೋ
ವೀಶ ನಮೋ ಫಣಿಪೇಶ ನಮೋ ರು
ದ್ರೇಶ ನಮೋ ಉಮೇಶÀ ನಮೋ
ವಾಸವ ಮುಖ ದೇವೇಶ ನಮೋ ದು
ವಾಸವ ನಮೋ
ಭೇಶ ಬಿಂದು ಕ್ಷಿತಿಪೇಶ ನಮೋ ಹರಿ
ವ್ಯಾಸ ಖಷಭ ಮಹಿದಾಸ ನಮೋ 4

ಲೊಕಾಂತರ್ಗತ ಲೋಕ ನಿಯಾಮಕ
ಲೋಕಾಲೋಕ ವಿಲೋಕನ ವಿಷಯ ತ್ರಿ
ಲೋಕಾಧಾರಕ ಪಾಲಯ ಮಾಂ
ಲೊಕಮಹಿತ ಪರಲೋಕಪ್ರದ ವರ
ಲೋಕೈಕೇಶ್ವರ ಪಾಲಯ ಮಾಂ
ಲೋಕ ಜನಕ ತೈ ಲೋಕ್ಯ ಬಂಧು ಕರು
ಣಾಕರ ವೇಂಕಟ ಪಾಲಯಮಾಂ 5

ಮುಕ್ತಾಮುಕ್ತ ನಿಷೇಧಿತಾವಯವಾ
ಸಕ್ತ ಜನಪ್ರಿಯ ಪಾಲಯ ಮಾಂ
ರಕ್ತ ಪೀತನಿಭ ಪಾಲಯ ಮಾಂ
ನಿಗಮ ತತಿಸೂಕ್ತ ಸಿತಾಸಿತ
ಸ್ವಾಂತ ಮಹಿಮ ಸಂ
ಯುಕ್ತ ಸದಾ ಹೇ ಪಾಲಯ ಮಾಂ
ನಿಗಮ ತತಿನಿಭ ಪಾಲಯ ಮಾಂ
ಯುಕ್ತಾಯುಕ್ತಾ ನಜಾನೆ ರಮಾಪತೆ
ಭಕ್ತೋಹಂ ತವ ಪಾಲಯ ಮಾಂ 6

ಕಮಠ ಧ
ರಾಧರ ನರಹರೇ ಪಾಲಯ ಮಾಂ
ಸಾಧಿತ ಲೋಕತ್ರಯ ಬಲಿಮದಹ ಹಯ
ಮೇಧ ವಿಭಂಜನ ಪಾಲಯ ಮಾಂ
ಭೂಧರ ಭುವನ ವಿರೋಧಿ ಯಮಕುಲ ಮ
ಹೋದಧಿ ಚಂದ್ರಮ ಪಾಲಯ ಮಾಂ
ಬುದ್ಧ ತನು ಶ್ರೀ ದಕಲ್ಕಿ ಕಪಿ
ಲಾದಿರೂಪ ಹೇ ಪಾಲಯ ಮಾಂ 7

ಶರಣಾಗತ ರಕ್ಷಾಮಣಿ ಶಾಙ್ರ್ಗ
ಅರಿದರಧರ ತವ ದಾಸೋಹಂ
ಪರ ಪುರಷೋತ್ತಮ ವಾಙ್ಮನೋಮಯ ಭಾ
ಸ್ಕರ ಸನ್ನಿಭ ತವ ದಾಸೋಹಂ
ಗರುಡಸ್ಕಂಧ ಕರಾರೋಪಿತ ಪದ
ಸರಸಿಜಯುಗ ತವ ದಾಸೋಹಂ
ಉರಗಾಧಿಪ ಪರಿಯಂಕಶಯನ ಮಂ
ದರ ಗಿರಿಧರ ತವ ದಾಸೋಹಂ 8

ಸೃಷ್ಟಿ ಸ್ಥಿತಿಲಯಕಾರರೂಪ ಪ್ರ
ಹೃಷ್ಟ ತುಷ್ಟತವ ದಾಸೋಹಂ
ಪರಮೇಷ್ಟಿ ಜನಕ
ಶಿಷ್ಟೇ ಷ್ಟದಿಷ್ಟ ತವ ದಾಸೋಹಂ
ಜೇಷ್ಠ ಶ್ರೇಷ್ಠ ತ್ರಿವಿಷ್ಠ ದಾರ್ಚಿತ
ವೃಷ್ಣಿವರ್ಯ ತವ ದಾಸೋಹಂ
ಅಷ್ಟ ಫಲಪ್ರದ ಪಕ್ಷಿಧ್ವಜ ಜಗನ್ನಾಥ
ವಿಠ್ಠಲ ತವ ದಾಸೋಹಂ 9
*********