||ಬಂಟನಾಗಿ||
ವೈಕುಂಠದ ದಾಸರ ದಾಸರ ಮನೆಯ
||ಬಂಟನಾಗಿ||
ಹೊರ ಸುತ್ತು ಪ್ರಕಾರವ ಸುತ್ತಿ ನಾ ಬರುವೆ
ಬರುವ ಹೋಗುವವರ ವಿಚಾರಿಸಿ ಬಿಡುವೆ
||ಹೊರ||
ಕರದಿ ಕಂಬಿಯ ಹೊತ್ತು ,ಅಲ್ಲಿ ನಿಂತಿರುವೆ
ಹರಿಯ ಸಮ್ಮುಖದ ಓಲಗದೊಳು ಇರುವೆ
||ಕರದಿ||
||ಬಂಟನಾಗಿ||
ಮೀಸಲೂಳಿಗವಾ ನಾ ಮಾಡಿ ಕೊಂಡಿರುವೆ
ಶೇಷ ಪ್ರಸಾದವ ಉಂಡು ಕೊಂಡಿರುವೆ
||ಮೀಸಲು||
ಶೇಷಾಚಲ ನಮ್ಮ ನೆಲೆಯಾದಿಕೇಶವಾ...ಆ...||2||
ದಾಸರ ದಾಸರ ದಾಸರ ಮನೆಯ
||ಬಂಟನಾಗಿ||
*********