Showing posts with label ಹರಿಯನರಿಯದ ಜನುಮ ಧರೆಯೊಳಗಧಮಾಧಮ mahipati. Show all posts
Showing posts with label ಹರಿಯನರಿಯದ ಜನುಮ ಧರೆಯೊಳಗಧಮಾಧಮ mahipati. Show all posts

Thursday, 12 December 2019

ಹರಿಯನರಿಯದ ಜನುಮ ಧರೆಯೊಳಗಧಮಾಧಮ ankita mahipati

ಭೀಮಪಲಾಸ್ ರಾಗ ಝಪ್ ತಾಳ 

ಹರಿಯನರಿಯದ ಜನುಮ ಧರೆಯೊಳಗಧಮಾಧಮ
ಹರಿಯ ನೆನೆಯದ ನರನು ಪಾಮರನು ||ಧ್ರುವ||

ಹರಿಗೆ ನಮಿಸದ ಶಿರವು ತೋರುವ ಬೆಚ್ಚಿನ ತೆರವು
ಹರಿಗೆ ವಂದಿಸದ್ಹಣೆಯು ಹುಳಕ ಮಣಿಯು
ಹರಿಗೆ ಮುಗಿಯದ ಕೈಯು ಮುರಕ ಕೀಲಿಯ ಕೈಯು
ಹರಿಯ ಕೊಂಡಾಡದ ನಾಲಿಗೆ ಒಡಕ ಸೊಲಿಗೆಯು ||೧||

ಹರಿಯ ಸ್ತುತಿಸದ ಮುಖವು ಚೀರುವ ಚಿಮ್ಮಡಿಯ ಮುಖವು
ಹರಿಕಥೆ ಕೇಳದ ಕಿವಿಯು ಹಾಳುಗವಿಯು
ಹರಿಯ ನೋಡದ ಕಣ್ಣು ತೋರುವ ನವಿಲ್ಗರಿಗಣ್ಣು
ಹರಿಯ ಆರಾಧಿಸದ ಮನವು ಹೀನತನವು ||೨||

ಹರಿಯ ಸೇವೆಗೊದಗದ ಕಾಲು ಮುರಕ ಹೊರಸಿನ ಕಾಲು
ಹರಿಗೆ ಮಾಡದ ಭಕ್ತಿ ಮೂಢಯುಕ್ತಿ
ಹರಿಯೆ ಶ್ರೀಗುರುವೆಂದು ಗುರುವೆ ಪರದೈವೆಂದು
ಸಲೆ ಮೊರೆಹೊಕ್ಕಿಹ ಮೂಢ ಮಹಿಪತಿಯು ||೩||
****

ಹರಿಯನರಿಯದ ಜನುಮ ಧೆರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ಪ  


ಹರಿಗೆ ನಮಿಸದ ಸಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣಿಯು ಹುಳಕ ಮಣಿಯು ಹರಿಗೆ ಮುಗಿಯದ ಕೈಯು ಮುರುಕ ಕೀಲಿಯ ಕೈಯು ಹರಿ(ಯ) ಕೊಂಡಾಡುವ ನಾಲಿಗೆ ಒಡಕ ಸೊಲಿಗೆಯ 1 

ಹರಿಯ ಸ್ತುತಿಸದ ಮುಖ ಚೀರುವ ಚಿಮ್ಮಡಿಯ ಮುಖವು ಹರಿಕಥೆ ಕೇಳದ ಕಿವಿಯು ಹಾಳುಗವಿಯು ಹರಿಯ ನೋಡದ ಕಣ್ಣು ತೋರುವ ನವಲ್ಗರಿಗಣ್ಣು ಹರಿಯ ಆರಾಧಿಸದ ಮನವು ಹೀನತನವು 2 

ಹರಿಯ ಸೇವೆಗೊದಗದ ಕಾಲು ಮುರುಕ ಹೊರಸಿನ ಕಾಲು ಹರಿಗೆ ಮಾಡದ ಭಕ್ತಿ ಮೂಢ ಯುಕ್ತಿ ಹರಿಯೆ ಶ್ರೀಗುರುವೆಂದು ಗುರುವೆ ಪರದೈವವೆಂದು ಸಲೆಮೊರೆಹೊಕ್ಕಿಹ ಮೂಢ ಮಹಿಪತಿಯ 3

*****