..
kruti by ಬೇಲೂರು ವೈಕುಂಠ ದಾಸರು belur vaikunta dasaru
ಅರಿತು ಸಿಂಗರಮಾಡಿ ಅರಿತು ಸಿಂಗರ ಮಾಡಿ ಪ
ಅರಿತು ಸಿಂಗರಮಾಡಿ ಈ ರಮೆಯ ನೋಡೀ
ಗರುವ ಚೆನ್ನಿಗರಾಯ ಬರುತಿಹನೆ ಬೇಗಾ ಅ.ಪ
ಅಳಿಕುಂತಳೆಗೆ ನೋಡಲಲರ್ದ ಸಂಪಿಗೆ ಯೇಕೆ
ಚೆಲುವ ಜಾಜಿಯ ಕಮ್ಮಲರ ತುರುಬಿರಮ್ಮಾ
ಹೊಳೆವ ಚಂದಿರಮುಖಿಗೆ ವಳಿನವೇತಕೆ ಕೈಗೆ
ಅಲರ್ದ ನೈದಿಲೆ ಕುಸುಮವನೆ ಕೊಡಿರೆಯಮ್ಮಾ 1
ಕೀರವಾಣಿಗದೇಕೆ ಜವ್ವಾಜಿ ಪರಿಮಳವು
ಚಾರುಕತ್ತುರಿ ಹದನ ಮಾಡಿರಲು ಮುನ್ನಾ
ತೋರ ಕುಚಗಿರಿಗಳಿಗೆ ವಜ್ರಭೂಷಣವೇಕೆ
ಹಾರವಿದೆ ತಂದಿರಿಸಿ ಮಂಜುಳವಿದೆನಿಸೀ 2
ಲಾವಣ್ಯನಿಧಿಯೀಕೆ ಬೇರೆ ಸಿಂಗರವೇಕೆ
ತೀವಿದಂಗದಕಾಂತಿ ನಯನ ವಿಶ್ರಾಂತೀ
ಶ್ರೀವೇಲಪುರದಲ್ಲಿ ನೆಲಸಿಹ ಕರುಣದಿಂದ
ದೇವ ವೈಕುಂಠಕೇಶವನರಸಿಯೀಕೇ 3
***