ಕಾಖಂಡಕಿ ಶ್ರೀ ಕೃಷ್ಣದಾಸರು
ಮಾತನಾಡಲೆ ಜಾಣೆ ಮೋಹನಿಭಿ ಮದಯಾನೆ| ರೀತಿ ನಿನಗುಚಿತವೇನೇ|ಯಾತಕಿದು ಮನ ಮುನಿಸು| ಎನ್ನೊಳು ಸುಖಬೆರೆಸು ಪ್ರೀತಿ ರತಿಸೊಬಗು ದೊರೆನಾರೀ ಪ
ತಿಂಗಳಾನನೆ ನಿನ್ನ ತೋಳಿಂಬವಿಲ್ಲದಿರೆ| ಕಂಗಳಿವೆ ಗೊಡವಲ್ಲೆ ನಲ್ಲೆ| ಅಂಗ ದವಯವವು ತಮ್ಮ ಅರ್ಥಿಯನೆ ಜರಿದವಾ| ಲಿಂಗನವ ಬಯಸಿ ನೋಡೆ ನೀಡೇ1
ಮುಂದಕಡಿಯಿಡಲಾರೆ ಮನಸೋತವಗೆ ದಯ| ದಿಂದಕರ ಪಲ್ಲವಾರೆ ದೋರೆ| ಬಂದ ನಿನ್ನಯ ವಿರಹ ಬಹಳ ತಾಪಕ ಸರಸಾ| ನಂದ ಮಳೆಯಗರಿಯೇ ವೆರಿಯೇ 2
ಏಣಾಕ್ಷಿ ಕೇಳಿನ್ನಯ ದೇವನೀಗ ಯಾಚಕನು| ತಾನಾಗಿಬಂದೆನಲ್ಲೆ ನಿಲ್ಲೆ| ತಾ ನೊಲಿದು ಅಧರಾಮೃತ ಫಲವೇ ಸೂರೆಯನು| ಮೌನದಲಿ ಕೊಡಲಿಬಾರೇ ನೀರೇ 3
ಕಾಂತೆ ನಿನ್ನ ವಿಯೋಗ ಕೇಳು ಜನವನ ವಾಗೆ| ಎಂತಶನ ಶುಚಿ ಹೇಳೆ ಕೇಳೆ| ಕಂತುವಿನ ಶರಗಳರಕಂ ಮಡುವಂ ಪೊಕ್ಕೆಗುಣ| ವಂತೆ ಫಣೀ ವೇಣಿ ಪಿಡಿಯೇ ಜಡಿಯೆ4
ಮಂದಗಮನೆ ಬುದ್ದಿಮೋಹಿಸುವದೇನು|ನಿಜ| ಛಂದ ವಾಜಿಯಲಿ ಕೂಡೆ ನೋಡೇ| ಎಂದ ವಚನನಲಿದು ಎರಗಿ ಗಿರಿ ಮಹಿಪತಿ|ನಂದ ನೊಡೆಯನ ನೆರದಳೇ ತರಳೇ 5
***