RSS song .
ಪಣತೊಡು ಬಲಿ ಕೊಡು ನಾಡಸೇವೆಗೆ ||ಪ||
ಸ್ವಾರ್ಥ ಬಿಡು ತ್ಯಾಗ ತೊಡು, ಮೋಹ ಮಮತೆ ಬದಿಗಿಡು,
ಸುಖದ ಚಿಂತೆ ದೂರಿಡು, ಧೈರ್ಯದಿಂದ ಮುಂದೆ ಸಾಗು ಕಾರ್ಯಕ್ಷೇತ್ರಕೇ ||೧||
ಲಕ್ಷ್ಮಿ ಪದ್ಮಿನೀಯರ, ಶಿವ ಪ್ರಭು ಪ್ರತಾಪರ,
ಬಸವ ಚಾಣಕ್ಯರ, ಭಕ್ತಿ ಶಕ್ತಿ ಶೌರ್ಯ ನೆನೆಸು ನಮಿಸು ಮಾತೆಯ ||೨||
ದೇಶ ಹಿತ, ಸ್ವಜನ ಹಿತ, ನನ್ನ ಹಿತವಿದೆನ್ನುತಾ
ದೇಶಕಾಗಿ ದುಡಿಯುತಾ, ಹಗಲು ಇರುಳು ದೇಹ ಸವೆಸು ಧ್ಯೇಯ ಪೂರಿಗೇ ||೩||
ನಾಡ ಮಕ್ಕಳೇಳಲಿ, ಕೂಡಿ ಒಂದೇ ಆಗಲಿ,
ಬಿಡದೆ ಸೇವೆ ಗೈಯಲಿ, ನಾಡು ಗೆಲಲಿ ಮೇಲ್ಮೆ ಬರಲಿ ಭಾರತಾಂಬೆಗೇ ||೪||
***
paNatoDu bali koDu nADasEvege ||pa||
svArtha biDu tyAga toDu, mOha mamate badigiDu,
suKada ciMte dUriDu, dhairyadiMda muMde sAgu kAryakShEtrakE ||1||
lakShmi padminIyara, Siva praBu pratApara,
basava cANakyara, bhakti Sakti Sourya nenesu namisu mAteya ||2||
dESa hita, svajana hita, nanna hitavidennutA
dESakAgi duDiyutA, hagalu iruLu dEha savesu dhyEya pUrigE ||3||
nADa makkaLELali, kUDi oMdE Agali,
biDade sEve gaiyali, nADu gelali mElme barali BAratAMbegE ||4||
***