Showing posts with label ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ vaikunta vittala. Show all posts
Showing posts with label ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ vaikunta vittala. Show all posts

Sunday 1 August 2021

ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಪಾಲಿಪುದು ನಯನಗಳ ನಾಲಿಗೆಯ ನೀನು

ಶ್ರೀಲೋಲ ಸಾರ್ವಭೌಮನೇ ಪ


ನೀಲಮೇಘಶ್ಯಾಮ ಬೇಲಾಪುರಾಧೀಶ

ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ


ಪರಮಪದನಾಥ ಇಂದಿರೆಯರಸ ಸಕಲ ನಿ

ರ್ಜರರು ಪೂಜಿಸುವಂಘ್ರಿಯಾ

ಶಿರಿಯನೀಕ್ಷಿಸಿ ಬದುಕಿ ಪದ ನಾಮಾ ಸುಳಾದಿ

[ವರ]ನೇಮದಿಂ ಪಾಡೀ ಆಡೀ

ಮೊರೆಯೊಕ್ಕು ಬದುಕಿ ಆವರಿಸಿಕೊಂಡಗಲದಿಹ

ದುರಿತಭವ ಶರಧಿಯಾ

ಪಿರಿದು ದಾಟುವೆನೆಂದು ಭರದೊಳೈದಿದವಗಾ

ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1


ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು

ದಿಂದು ಊನನಲ್ಲಾ

ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು

ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ

ನಂದವಳಿದುಬ್ಬಸದೊಳು

ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ

ವೃಂದಗಳು ನಿಂದಿರುವವೆ ಸ್ವಾಮಿ 2


ಮನುಜ ಮಾಡಿದ ಪಾತಕಗಳನು ಎಣಿಸುವಡೆ

ಘಣಿರಾಜಗಳವಡುವುದೇ

ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ

ರಣಜನರೊಳೇಂಪುರುಳಿರುವುದೇ

ಚಿನುಮಯನೆ ಭಕ್ತವತ್ಸಲನೆ ಅಚ್ಚುತz

ಸನವಗುಣಗಳನೀ ಮರೆದು

ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ

ಧನ್ಯನೆಲೊ ವೈಕುಂಠರಮಣಾ 3

***