by ಪ್ರಸನ್ನವೆಂಕಟದಾಸರು
ದೇವ ಬಾರೊ ಶ್ರೀನಿವಾಸದೇವನೆ ಬಾರೊ ನನ್ನದಾವದಾವಪರಿಯ ತಪ್ಪ ಕಾವನೆ ಬಾರೊಪ.
ಜೀವನ ಪಾವನವ ಮಾಡುವನೆ ಬಾರೊ ನನ್ನಭಾವದ ಬಯಕೆ ಪೂರೈಸುವನೆ ಬಾರೊ 1
ಧ್ಯಾನಿಸಲೊಮ್ಮ್ಯಾರೆ ದಯದಿ ನೀ ನಿಲ್ಲಬಾರೊ ಅಜ್ಞಾನ ನಾಶ ಮಾಡುವ ಕೃಪಾನಿಧಿ ಬಾರೊ 2
ಹಡೆದ ತಾಯಿ ತಂದೆಗುರುಒಡೆಯನೆ ಬಾರೊ ಎನ್ನನಡೆ ನುಡಿ ವಿಷಮೆನ್ನದೆ ಕೈ ಪಿಡಿಯಲು ಬಾರೊ 3
ತೆರೆ ತೆರೆ ಬಪ್ಪಾಸೆಯ ಚರಿಸಲು ಬಾರೊ ಆತುರದ ಕಾಮಾದ್ಯರ ನೀನೊರೆಸಲು ಬಾರೊ 4
ಕ್ಷುಲ್ಲನುದಾಸಿಸುದುಚಿತಲ್ಲವೊ ಬಾರೊ ಪ್ರಾಣದೊಲ್ಲಭ ಬಿರುದು ನಿನ್ನದಲ್ಲೇನೋ ಬಾರೊ 5
ಪಾಪಗಳು ಘನ್ನವಾದರೇನಯ್ಯ ಬಾರೊಕೃಪಾಪಾಂಗದಲ್ಲವು ಉಳಿಯಲಾಪವೆ ಬಾರೊ 6
ಶ್ರೀರಮಣ ಎಂದಿಗಾಪ್ತರಾರಿಲ್ಲೊ ಬಾರೊ ಸುಖತೀರಥೇಶ ಪ್ರಸನ್ವೆಂಕಟರಾಯ ಬಾರೊ 7
***
ದೇವ ಬಾರೋ ಶ್ರೀನಿವಾಸ ದೇವನೆ ಬಾರೋ ನನ್ನ –
ದಾವ ದಾವ ಪರಿ ತಪ್ಪಕಾವನೆ ಬಾರೋ || pa ||
ಜೀವನ ಪಾವನವ ಮಾಡುವನೆ ಬಾರೋ ನನ್ನ-
ಭವದ ಬಯಕೆ ಪೂರೈಸುವನೆ ಬಾರೋ || 1 ||
ಧ್ಯಾನಿಸಲೊಮ್ಯಾರೆ ದಯದಿ ನೀ ನಿಲ್ಲಿಬಾರೋ ಅ-
ಜ್ಞಾನ ನಾಶನ ಮಾಡುವ ಕೃಪಾನಿಧಿ ಬಾರೋ || 2 ||
ಹಡೆದ ತಾಯಿ ತಂದೆ ಗುರು ಒಡೆಯನೆ ಬಾರೋ ಎನ್ನ –
ನುಡಿ ನುಡಿ ವಿಷಮೆನ್ನದೆ ಕೈವಿಡಿಯಲಿ ಬಾರೋ || 3 ||
ತೆರೆ ತೆರೆ ಬಪ್ಪಾಶೆಯ ಚರಿಸಲಿ ಬಾರೋ ಆ-
ತುರದ ಕಾಮಾದ್ಯರ ನೀನೊರಸಲಿ ಬಾರೋ || 4 ||
ಪುಲ್ಲನುದಾಶಿಸುವುದುಚಿತಲ್ಲ ಬಾರೊ ಪ್ರಾಣ-
ದೊಲ್ಲಭ ಬಿರಿದು ನಿನ್ನದಲ್ಲೇನೋ ಬಾರೊ || 5 ||
ಪಾಪಗಳು ಘನ್ನವಾದರೇನಯ್ಯ ಬಾರೋ ಕೃ-
ಪಾಪಾಂಗದಲ್ಲಿವು ಉಳಿಯಲಾಪವೆ ಬಾರೋ || 6 ||
ಶ್ರೀರಮಣ ಇಂದು ಗೋಪ್ತರಾರಿಲ್ಲ ಬಾರೋ ಸುಖ-
ತೀರಥೇಶ ಪ್ರಸನ್ವೆಂಕಟರಾಯ ಬಾರೋ || 7 ||
***
Dēva bārō śrīnivāsa dēvane bārō nanna – dāva dāva pari tappakāvane bārō || pa ||
jīvana pāvanava māḍuvane bārō nanna- bhavada bayake pūraisuvane bārō || 1 ||
dhyānisalomyāre dayadi nī nillibārō a- jñāna nāśana māḍuva kr̥pānidhi bārō || 2 ||
haḍeda tāyi tande guru oḍeyane bārō enna – nuḍi nuḍi viṣamennade kaiviḍiyali bārō || 3 ||
tere tere bappāśeya carisali bārō ā- turada kāmādyara nīnorasali bārō || 4 ||
pullanudāśisuvuducitalla bāro prāṇa- dollabha biridu ninnadallēnō bāro || 5 ||
pāpagaḷu ghannavādarēnayya bārō kr̥- pāpāṅgadallivu uḷiyalāpave bārō || 6 ||
śrīramaṇa indu gōptarārilla bārō sukha- tīrathēśa prasanveṅkaṭarāya bārō || 7 ||
Plain English
Deva baro srinivasa devane baro nanna – dava dava pari tappakavane baro || pa ||
jivana pavanava maduvane baro nanna- bhavada bayake puraisuvane baro || 1 ||
dhyanisalomyare dayadi ni nillibaro a- jnana nasana maduva krpanidhi baro || 2 ||
hadeda tayi tande guru odeyane baro enna – nudi nudi visamennade kaividiyali baro || 3 ||
tere tere bappaseya carisali baro a- turada kamadyara ninorasali baro || 4 ||
pullanudasisuvuducitalla baro prana- dollabha biridu ninnadalleno baro || 5 ||
papagalu ghannavadarenayya baro kr- papangadallivu uliyalapave baro || 6 ||
sriramana indu goptararilla baro sukha- tirathesa prasanvenkataraya baro || 7 ||
***