Showing posts with label ಮಲವು ತೊಳೆಯಬಲ್ಲುದೆಮನವ purandara vittala. Show all posts
Showing posts with label ಮಲವು ತೊಳೆಯಬಲ್ಲುದೆಮನವ purandara vittala. Show all posts

Thursday 5 December 2019

ಮಲವು ತೊಳೆಯಬಲ್ಲುದೆಮನವ purandara vittala

ಪುರಂದರದಾಸರು
ರಾಗ ಕಾಪಿ. ಏಕ ತಾಳ

ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ ||ಪ||
ಹಲವು ತೀರ್ಥಂಗಳಲಿ ಮುಳುಗಿ ಹಲುಬಿದರೆ ಫಲವೇನು ||ಅ.ಪ||

ಭೋಗ ವಿಷಯ ಫಲವನುಂಡು ರಾಗ ಲೋಭದಿಂದ ಮತ್ತ-
ನಾಗಿ ಮೆರೆಯುತಿರೆ ಅವನ ಭಾಗ್ಯವಂತನೆಂಬರೆ
ಯೋಗಿಯಂತೆ ಜನರು ಮೆಚ್ಚೋ ಹಾಗೆ ಹೋಗಿ ನೀರಿನಲ್ಲಿ
ಕಾಗೆಯಂತೆ ಮುಳುಗೆ ಮಾಘಸ್ನಾನ ಫಲವು ಬಾಹೊದೆ ||

ಪರರ ಕೇಡ ಬಯಸಿ ಗುರು ಹರಿಯರನ್ನು ನಿಂದಿಸುತ್ತ
ಪರಮಸೌಖ್ಯವೆಂದು ಪರಸ್ತ್ರೀಯರನ್ನು ಬಯಸುತ
ಪರಮನಿಷ್ಠ ಮೌನಿಯಂತೆ ಧರೆಯ ಮೇಲೆ ಡಂಭ ತೋರಿ
ಹರಿವ ನೀರಿನ ತೀರದಿ ಕುಳಿತರೇನು ಬಕಧ್ಯಾನದಿ ||

ಕಾಸು ವೀಸಕಾಗಿ ಹರಿಯ ದಾಸನೆಂದು ತಿರುಗಿ ತಿರುಗಿ
ದೇಶ ದೇಶಗಳಲಿ ತೊಳಲಿ ಕಾಶಿಯಾತ್ರೆ ಪೋಗಲು
ಆಸೆಪಾಶ ಬಿಡದೆ ಮನಸ ಹೇಸಿ ವಿಷಯ ಬಯಸುವಂಥ
ವೇಷಧಾರಿಗಳಿಗೆ ಕಾಶೀ ಯಾತ್ರೆ ಫಲವು ಬಾಹೊದೆ ||

ತಂದೆ ತಾಯಿ ತಿರಿದು ತಿನಲು ಒಂದು ದಿನ ಕೇಳಲಿಲ್ಲ
ಮಂದಗಮನೆರೊಡನೆ ಆನಂದದಿಂದಲಿರುವರು
ತಂದೆ ಸತ್ತ ಮೇಲೆ ನೂರು ಮಂದಿ ವಿಪ್ರರಿಗುಣಿಸಿ
ತಮ್ಮ ತಂದೆ ತೃಪ್ತನಾದನೆಂಬರು ಮಂದ ಮತಿಯ ಜನಗಳು ||

ಏನು ಓದಲೇನು ಫಲ ಏನು ಕೇಳಲೇನು ಫಲ
ಜ್ಞಾನದಿಂದ ಅಚ್ಯುತನ ಧ್ಯಾನವಿಲ್ಲದವರಿಗೆ
ಮೌನ ನೇಮ ನಿಷ್ಠೆ ಏಕೇ ಹೀನ ಚಿತ್ತನಾದ ಮೇಲೆ
ಶ್ರೀನಿವಾಸ ಪುರಂದರ ವಿಠಲನು ಮೆಚ್ಚುವನೆ ಮರುಳೆ ||
***

pallavi

malava toLeya ballarallade manava toLeyaballare

anupallavi

halavu tIrttangaLali muLugi halubidare balavEnu

caraNam 1

bhOga viSaya balavanuNDu rAga lObhadinda mattanAgi mereyutire avana bhAgyavantanembare
yOgiyante janaru meccO hAge hOgi nIrinalli kAgeyante muLuge mAghasnAna balavu bAhode

caraNam 2

parara kEDa bhayasi guru hariyarannu nindisutta parama saukhyavendu para strIyarannu bayasuta
parma niSTa mauniyante dhareya mEle Dambha tOri hariva nIrina tIradi kuLitarEnu bhaktayAnadi

caraNam 3

kAsuvIsakAgi hariya dAsanendu tirugi tirugi dEsha dEshagaLali toLasi kAshi yAtre pOgalu
AshepAshe biDade manasa hEsi viSaya bhayasuvantha vEshadhArigaLige kAshI yAtre balavu bAhode

caraNam 4

tande tAyi tiridu tinalu ondu dina kELilla mandaga maneroDane Anandadindaliruvaru
tande satta mEle nUru mandi viprariguNisi tamma tande trptanAdanembaru manda matiya janagaLu

caraNam 5

Enu OdalEnu bala Enu kELalEnu bala jnAnadinda acyutana dhyAnavilladavarige
mauna nEma niSTe EkE hIna cittanAda mEle shrInivAsa purandara viTTalanu meccuvane maruLe
***

ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪ

ಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪ

ಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1

ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2

ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3

ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4

ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
*******