Showing posts with label ರಕ್ಷಿಸ ಬೇಕೆಮ್ಮನನುದಿನದಲ್ಲಿ pranesha vittala. Show all posts
Showing posts with label ರಕ್ಷಿಸ ಬೇಕೆಮ್ಮನನುದಿನದಲ್ಲಿ pranesha vittala. Show all posts

Saturday, 16 November 2019

ರಕ್ಷಿಸ ಬೇಕೆಮ್ಮನನುದಿನದಲ್ಲಿ ankita pranesha vittala

by ಪ್ರಾಣೇಶದಾಸರು
ರಕ್ಷೀಸಬೇಕೆಮ್ಮನನುದಿನದಲ್ಲಿ |ಪಕ್ಷಿರಾಜನೆ ಹರೀಸ್ಯಂದನಾ ಸ್ವಾಮಿ ಪ

ಇಂದ್ರಲೋಕಕ್ಕೆ ಪೋಗಿ ಕಲಹ ಮಾಡಿಪೀಯೂಷ|ತಂದನುಜರಿಗಿತ್ತ ಧೀರನೆ |ಸಿಂಧೂವಿನೊಳಗಿದ್ದಕೂರ್ಮಗಜಮಂದಿಯಾ |ತಿಂದು ದಕ್ಕಿಸಿಕೊಂಡ ವೀರನೇ 1

ಪಾದಪ ಮುರಿದು ವಾಲಖಿಲ್ಲ್ಯೆರ ಪೋಷಿಸಿ |ಮೋದದಿಂದ ವರವು ಪಡಿಯೋ ||ಮಾಧವನಂಘ್ರಿ ಕಮಲದೊಳಗೆ ಇಟ್ಟ |ಹೇ ದಯಾಂಬುಧಿ ನಿನಗೆಣೆ ಯಾರೋ 2

ಅರುಣಾನುಜ ಮಾತೆಯ ಬಯಕೆ ಪೂರೈಸೀದ |ಪರಮಸಮರ್ಥ ಭಕ್ತವತ್ಸಲಾ ||ಉರಗಾಶನನೆ ನಿನ್ನ ಪ್ರಾರ್ಥಿಸುವೆನುನಿತ್ಯ|ಹರಿಸೇವೆ ವಿನಹ ಮತ್ತೊಂದೊಲ್ಲೆನೊ 3

ಪ್ಲವಗರ ಪಾಲಿಸಿದೆ ರಘುಜಾನ ಒಲಿಸಿದೆ |ತವಕಬಲಿವೈದ ಮುಕುಟ ತಂದೆ ||ದಿವಿಜರಿಗೆ ಸಹಾಯವಾದೆ ವಿಪ್ರರ ಕಾಯ್ದೆ |ಅವರಾರೇನರಿಯರೊ ನಿನ್ನ ಲೀಲೆ 4

ಶ್ರೀನಾಥನ ಪಾದಾಬ್ಜದಲ್ಲಿನಿರತಮನ |ತಾನಿರುವಂತಾಗಲಿ ಖೇಚರಾ ||ಮೌನಿ ಕಶ್ಯಪ ಜಾತಾ ಲಾಲಿಸುವದೆನ್ನ ಮಾತಾ |ಪ್ರಾಣೇಶ ವಿಠಲನ ನಿಜದೂತ 5
*******