ರಾಗ ಶಿವರಂಜಿನಿ ತಾಳ ಆದಿ
ಮುರಳೀ ಬಾರಿಸೋ ಮಾಧವ ಕುಣಿಯುವೆ |ಪ|
ಭವದ ಸಂತಾಪವು ಕೊನೆಯಾಗಲಿ |
ಭುವಿಯೊಳು ಜೀವನ ಸವಿಯಾಗಲಿ |
ನವವಿಧ ಭಕುತಿಯು ನಲಿದಾಡಲಿ |
ಕಿವಿತುಂಬ ಕೇಳಿ ನಾ ನಲಿಯುವೆ ಶ್ರೀಕರ ॥1॥
ಅರಿಷಡವರ್ಗಗಳೆಲ್ಲ ಮರೆಯಾಗಲಿ |
ಹರುಷ ಮಾನಸದಲ್ಲಿ ಸೆರೆಯಾಗಲಿ |
ಮುರಳಿಯ ಧ್ವನಿಯು ತಾ ದೊರೆಯಾಗಲಿ |
ಪರಮ ವೈರಾಗ್ಯವೆ ಸಿರಿಯಾಗಲಿ ದೇವ ॥|2॥
ಸಾಲೋಕ್ಯ ಸಾರೂಪ್ಯ ಸಾಯುಜ್ಯವು |
ಈ ಲೋಕದಲ್ಲೀಗ ಈ ಲಾಭವು ॥
ಶ್ರೀಲೋಲ ಗೋಪಾಲ ಬಾಲ ಪ್ರಸನ್ನನೆ |
ಮೇಲಾಯ್ತು ನರಜನ್ಮ ಇರಲಿ ಎಂದೆಂದದಿಗು ॥3॥
***
Lyrics:
muraliya bAriso mAdhava |
kuniyuva murali bAriso mAdhava ||
bhavada santApavu konegAdali
bhuviyolu jIvara saviyAgali
navavida bhakutiyu haridAdali
kivi tumba kEli nA naliyuve shrIkara || muraliya ... ||
arishad vargagalellA mareyAgali
harusha mAnasadalli serayAgali
muraliya dvaniyutA doreyAgali
parama vairAgyave siviyAgali dEva || muraliya ... ||
sAlokya sArUpya sAyujyavu
IlOkadallIga I lAbhavu
shrIlOla gOpAla bAla prasannanE
mElaytu narajanma virali yendendigu || muraliya ... ||
***