Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ಮಂಗಳಂ ಹಯವದನ mudduhayavadana vadiraja stutih. Show all posts
Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ಮಂಗಳಂ ಹಯವದನ mudduhayavadana vadiraja stutih. Show all posts

Friday, 27 December 2019

ಜಯ ಮಂಗಳಂ ನಿತ್ಯ ಶುಭ ಮಂಗಳಂ ಮಂಗಳಂ ಹಯವದನ ankita mudduhayavadana vadiraja stutih

ಜಯ ಮಂಗಳಂ ನಿತ್ಯ ಶುಭ ಮಂಗಳಂ.

ಮಂಗಳಂ  ಹಯವದನ ಪದಕಂಜ ಮಧುಪನಿಗೆ
ಮಂಗಳಂ ವಾಗ್ವಜ್ರಧಾರನಿಗೆ
ಮಂಗಳಂ  ವಾಗೀಶ ಕರಸಂಜಾತನಿಗೆ
ಮಂಗಳಂ ಗುರುವಾದಿರಾಜ ರಾಯರಿಗೆ.
ಜಯ ಮಂಗಳಂ ನಿತ್ಯ ಶುಭ ಮಂಗಳಂ

ಮಂಗಳಾಕಾರನಿಗೆ ವನೆಹಿತ ಗುಣವಂತನಿಗೆ
ಕಂಜದಳ ನೇತ್ರನಿಗೆ ಕಾಮರಿಗೆ
ಅಂಜನೇಯ. ಸುತಮತಗೆ ಅನುಕೂಲವಾದವಗೆ
ಕುಂಜರಗಮನ ಯತಿಸಾ್ರವಬೌಮರಿಗೆ.
ಜಯ ಮಂಗಳಂ ನಿತ್ಯ ಶುಭ ಮಂಗಳಂ

ಪರಿ ಪರಿ ಚರಿತ್ರನಿಗೆ ಪರಿಪೂರ್ಣ ಚಿತ್ಸುಖಗೆ
ಪರಮ ಹಂಸಾಚಾರ್ಯ ಪದವೀವಗೆ
ಶರಣಜನ ಪಾಲಕೆಗೆ ಸದ್ಧರ್ಮನಿರತನಿಗೆ
ಉರಗ ಭೂಷಣನಂತೆ ಊರ್ವಿಯೊಳು ಮೆರೆವವಗೆ.
ಜಯ ಮಂಗಳಂ ನಿತ್ಯ ಶುಭ ಮಂಗಳಂ

ವಿದ್ವದಾಧಾರನಿಗೆ ವಿಜಿತಾರಿವರ್ಗನಿಗೆ
ಅದ್ವೈತ ಮತ ಹರಗೆ ಆಶ್ಚರ್ಯಗೆ
ಊರ್ಧ್ವ ಪುಂಡ್ರಾಂಕಿತಗೆ ಉತ್ಕೃಷ್ಟ ತೇಜನಿಗೆ
ಮುದ್ದು ಹಯವದನ್ನ ಮುದದಿಂದ ನೆನವರಿಗೆ.
ಜಯ ಮಂಗಳಂ ನಿತ್ಯ ಶುಭ ಮಂಗಳಂ
*************