Showing posts with label ಸುಮ್ಮನೆ ಗತಿಯ ಬಯಸಿದರಾಹುದೇ gurumahipati. Show all posts
Showing posts with label ಸುಮ್ಮನೆ ಗತಿಯ ಬಯಸಿದರಾಹುದೇ gurumahipati. Show all posts

Wednesday 1 September 2021

ಸುಮ್ಮನೆ ಗತಿಯ ಬಯಸಿದರಾಹುದೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸುಮ್ಮನೆ ಗತಿಯ ಬಯಸಿದರಾಹುದೇ | ಹಮ್ಮ ನೀಗಿ ಕ್ಷಿತಿಯೊಳು ವಮ್ಮನವಾಗಿ ನಿಲ್ಲದೇ ಪ 


ಭಕುತಿಯಂಕುರವಿಲ್ಲಾ ಯುಕುತಿ ಸಾಧನವಿಲ್ಲಾ | ಮುಖದಲಿ ಸ್ತುತಿ ಸ್ತವನಗಳಿಲ್ಲಾ | ಪ್ರಕಟದಿ ಶೋಡಷ | ಸುಕಲೆಯಾರ್ಚನೆಯಿಲ್ಲಾ | ಅಕಳಂಕ ದೇವ ನಂಬುಗೆ ದೃಢ ವಿಡಿಯಲಿಲ್ಲಾ 1 

ವೇದ ಪುರಾಣವನು ಓದಿ ಕೇಳಿದರೇನು | ವಾದಗುಣದಿ ಹಿಂಗಲಿಲ್ಲಾ ತಾನು | ಸಾಧಿಸಿಕೊಳ್ಳದೇ | ಸಾಧುರ ಬೋಧವನು | ಗಾರ್ದಭ ಚಂದನ ಹೊತ್ತಂತೆ ಏನಾದರೇನು 2 

ಗುರುಪಾದಕೆರಗದೆ | ಗುರುಮಾರ್ಗವರಿಯದೆ | ಮೊರೆವಾರು ಅರಿಮದವ ಮುರಿಯದೇ | ಪರವಸ್ತು ಇದೆಯೆಂದು | ನರಭಾವ ಮರೆಯದೆ | ಗುರುಮಹಿಪತಿ ಸುತ ಪ್ರಭು ಗುರುತ ದೋರದೇ 3

***