Showing posts with label ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ jagannatha vittala RAAMANA NODIRAI NIMMAYA KAAMITA BEDIRAI. Show all posts
Showing posts with label ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ jagannatha vittala RAAMANA NODIRAI NIMMAYA KAAMITA BEDIRAI. Show all posts

Friday 1 October 2021

ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ ankita jagannatha vittala RAAMANA NODIRAI NIMMAYA KAAMITA BEDIRAI




ರಾಮನ ನೋಡಿರೈ , ನಿಮ್ಮಯ ಕಾಮಿತ ಬೇಡಿರೈ
ತಾಮರಸಸಖ ಸುವಂಶಾಬ್ಧಿಶರತ್ಸೋಮ , ಕಮಲಾಧಾಮ ||ಪ||

ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದ , ಅಜ ಪೂಜಿಸಿದ
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ , ಕಾಮಿತ ನೆರೆದ
ಭೂತಾಧಿಪನ ಭವನದೊಳಗರ್ಚನೆಗೊಂಡ , ಧೃತಕೋದಂಡ
ಮಾತಂಗಾರಿ ವಿರೋಧಿಯ ಜನಕನ ಮೇಧಾ ಕಾರಕೆ ಪೋದ ||೧||

ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿಕೊಟ್ಟ , ಜಗಕತಿದಿಟ್ಟ
ನಾಭಿಜನ್ಮನಿಹ ನಗರಾಸ್ಥಾನಕೆ ಬಂದ , ಶುಭಗುಣವೃಂದ
ವೈಭವದಿಂದ ಅಯೋಧ್ಯಾನಗರದಿ ಮೆರೆದ , ಕಾಮಿತಗರೆದ
ಸಾಭಿಮಾನದಲಿ ಸತಿಯಳಿಗಿತ್ತನು ವರವ , ದೇವರದೇವ ಗರುವ ||೨||

ಜಾಂಬವಂತನಿಗೆ ಜಾನಕಿರಮಣನು ಈತ -ನಿತ್ತನುಧ್ಯಾತಾ
ಸಂಭ್ರಮದಲಿ ವೇದಗರ್ಭಮೊಡನಾಡ್ದ , ಮುಕ್ತಿಯ ನೀಡ್ದ
ಕುಂಭಿನೀಶ್ವರನ ಕೋಶದಿ ಬಹುದಿನವಾಸ -ವೆಸಗಿದನೀಶ
ನಂಬಿ ತುತಿಸುತಿಹ ನರಹರಿ ಮುನಿಪಗೆ ಒಲಿದ , ಮೋದದಿ ನಲಿದ ||೩||

ಅಲವ ಬೋಧಮುನಿ ಅತಿ ಮೋದದಲರ್ಚಿಸಿದ , ಸಲೆ ಮೆಚ್ಚಿಸಿದ
ಇಳೆಯೊಳು ಬಹುಯತಿಗಳ ಕರಪೂಜಿತನಾದ , ಲೀಲಾವಿನೋದ
ಬಲು ನಂಬಿದ ಭಕುತರ ಕಲಿ-ಮಲಗಳ ಕಳೆದ , ಮನದೊಳು ಪೊಳೆದ
ಸುಲಲಿತಗುಣನಿಧಿ ವಸುಧೇಂದ್ರಾರ್ಯರ ಪ್ರಿಯ , ಕವಿಜನಗೇಯ ||೪||

ವಾರಿಧಿ ಬಂಧನ ವಾನರ ನಾಯಕನಾಳ್ದಾ , ದೈತ್ಯರ ಸೀಳ್ದ
ನಾರದಮುಖ ಮುನಿನಮಿತಾ ಪದಾಂಬುಜನೀತ, ತ್ರಿಗುಣಾತೀತ
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವ , ದುರಿತವ ತಡೆವ
ನೀರಜಾಕ್ಷ ಜಗನ್ನಾಥವಿಠಲ ನಿಶ್ಚಿಂತ , ಸೀತಾಕಾಂತ ||೫||
****

ರಾಗ ಭೈರವಿ(ಬಿಲಾವಲ್) ಆದಿತಾಳ(ಕಹರವಾ)(raga tala may differ in audio)

pallavi

rAmana nODirai nimmaya kAmita bEDirai tAmarasa sakha suvamshAbdhi sharatsOma kamalAdhAma

caraNam 1

dhAtananujnadi dEvattvaSTra nirmisida aja pUjisida jyOtirmaya jAbAli muniya tapavarida kAmita nereda
bhUtAdipana bhavaNadoLa garjane goNDa dhrta kOdaNDa mAtangAri virOdhiya janakana mEdhAkAreke pOdA

caraNam 2

saubhari munipage saukhya karuNisi koTTa jagakatidiTTa nAbhi janmaniha nagarAsthAnake bandA shubhaguNa vrnda
vaibhavadinda ayOdhyA nagaradi mereda kAmita gareda sAbhimAnadali satiyaLIgittanu varava dEvara dEva garuva

caraNam 3

jAmbavantanige jAnakiramaNanu Ita nittanu dhyAtaA sambhramadindali vEda garbha moDanADdA muktiya nIDda kumbhinEshvarana kOshadi bahudina vAsavesagidanIsha nambi tutisutha narahari munipage olida mOdadi nalida

caraNam 4

Alava bOdhamuni ati mOdadalarcisida sale meccisida iLeyoLu bahu yatigaLa kara pUjitanAda lIlA vinOda
balu nambida bhakutara kali malagaLa kaLeda manadoLu koLeda sulalita guNanidhi vasudEndrAryara priya kavijanagEya

caraNam 5

vAridhi bandhana vAnara nAyaka nALdA daitara sIldA nArada mukha muni namitA padAmba janita triguNAtIta
ArAdhiparige akhilArthagaLavanu koDuva duritava taDeva nIrajAkS jagannAtha viThala nishcinta sItAkAnta
***

ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ || ಪ ||
ತಾಮರಸಸಖ ಸುವಂಶಾಬ್ಧಿಶರತ್ಸೋಮಾ ಕಮಲಧೀಮ ||ಅ.ಪ.||

ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾ
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದಾ ಕಾಮಿತ ನೆರೆದಾ
ಭೂತಾಧಿಪನ ಭವನದೊಳರ್ಚನೆಗೊಂಡಾ ದೃತಕೋದಂಡಾ
ಮಾತಂಗಾರಿ ವರೂಥಿಯ ಜನಕ ಮೇದಾಗಾರಕೆ ಪೋದಾ || ೧  ||

ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿಧಿಟ್ಟ
ನಾಭಿಜನ್ಮನಿಹ ನಗವರ ಸ್ಥಾನಕೆ ಬಂದ ಶುಭಗುಣ ವೃಂದಾ
ವೈಭವದಿಂದಲಯೋಧ್ಯಾ ನಗರದಿ ಮೆರೆದಾ ಕಾಮಿತವೆರೆದಾ
ಸ್ವಾಭಿಮಾನದಲಿ ಸತಿಯಳಿಗಿತ್ತನು ವರವಾ ದೇವರ ದೇವಾ ||  ೨ ||

ಜಾಂಬವಂತನಿಗೆ ಜಾನಕಿರಮಣನು ಇತ್ತ ತನ್ನಯಧ್ಯಾತ
ಸಂಭ್ರಮದಲಿ ವೇದಗರ್ಭನೊಡನಾಡ್ದಾ ಮುಕ್ತಿಯ ನೀಡ್ದಾ
ಕುಂಭೀಶ್ವರನ ಸುಕೋಶದಿ ಬಹುದಿನ ವಾಸ ವೆಸಗಿದನೀಶಾ
ನಂಬಿ ತುತಿಸಿದ ನರಹರಿ ಮುನಿಪಗೆ ಒಲಿದಾ ಮೋದದಿ ನಲಿದ||  ೩  ||

ಅಲವಬೋಧಮುನಿ ಅತಿಮೋದದಲರ್ಚಿಸಿದ ಸಲೆ ಮೆಚ್ಚಿಸಿದ
ಇಳೆಯೊಳಗೆ ಬಹು ಯತಿಕರ ಪೂಜಿತನಾದ ಲೀ್ಲಾ ವಿನೋದ
ಬಲುನಂಬಿದ ಭಕುತರ ಕಲಿಮಲಗಳ ಕಳೆದ ಮನದೊಳು ಪೊಳೆದ
ಸುಲಲಿತ ಗುಣನಿಧಿ ವಸುಧೇಂದ್ರಾರ್ಯರ ಪ್ರೀಯ ಕವಿಜನಗೇಯ || ೪||

ವಾರಿಧಿಬಂಧನ ವಾನರ ನಾಯಕರಾಳ ದೈತ್ಯರ ಸೀಳ್ದಾ
ನಾರದ ಮುಖ ಮುನಿನಮಿತ ಪದಾಂಬುಜನೀತಾ ತ್ರಿಗುಣಾತೀತ
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವಾ ದುರಿತವ ತಡೆವ
ನೀರಜಾಕ್ಷ ಜಗನ್ನಾಥ ವಿಠ್ಠಲ ನಿಶ್ಚಿಂತಾ ಸೀತಾಕಾಂತ||೫||
***

"ಶ್ರೀವಸುಧೇಂದ್ರಾರ್ಯರ ಪ್ರಿಯ ಶ್ರೀಮೂಲರಾಮನನ್ನು ಶ್ರೀಜಗನ್ನಾಥದಾಸರು ಕಂಡ ಸೊಬಗು" 

ಶ್ರೀಮನ್ಮಧ್ವಾಚಾರ್ಯರ ಮೂಲಪೀಠದ ಮೇಲೆ ವಿರಾಜಿಸಿದ ಯತಿಸಾರ್ವಭೌಮ ಶ್ರೀವಸುಧೇಂದ್ರತೀರ್ಥರ ಕರದೊಳು ಮೆರೆವ ಶ್ರೀಮನ್ಮೂಲರಾಮನನ್ನು ಶ್ರೀವರದೇಂದ್ರತೀರ್ಥರ ವಿದ್ಯಾಶಿಷ್ಯರಾದ ಶ್ರೀಜಗನ್ನಾಥದಾಸರು "ಶ್ರೀವಸುಧೇಂದ್ರಾರ್ಯರಪ್ರಿಯ" ಎಂದು ಕೊಂಡಾಡಿ ಸ್ತೋತ್ರ ಮಾಡಿರುವುದು. 

ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ 
ತಾಮರಸಸಖ ಸುವಂಶಾಬ್ಧಿಶರತ್ಸೋಮಾ ಕಮಲಧೀಮ || ಪ|| 

ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದ ಅಜ ಪೂಜಿಸಿದ 
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ ಕಾಮಿತ ನೆರೆದಾ |
ಭೂತಾಧಿಪ್ಪನ ಭವನದೊಳರ್ಚನೆಗೊಂಡ ದೃತಕೋದಂಡ 
ಮಾತಂಗಾರಿ ವರೂಥಿಯ ಜನಕ ಮೇದಗಾರಕೆ ಪೋದ || 1 || 

ಎಂದು ಚತುರ್ಮುಖ ಬ್ರಹ್ಮಕರಾರ್ಚಿತ  ಶ್ರೀಮೂಲರಾಮದೇವರು ಬಂದ ಬಗೆಯನ್ನು ವರ್ಣಿಸಿ ಮುಂದಿನ ನುಡಿಗಳಲ್ಲಿ, 

.....
....
.....
ನಂಬಿ ತುತಿಸಿದ ನರಹರಿ ಮುನಿಪಗೆ ಒಲಿದಾ ಮೋದದಿ ನಲಿದಾ || 3 || 

ಅಲವಬೋಧಮುನಿ ಅತಿಮೋದದಲರ್ಚಿಸಿದ ಸಲೆ ಮೆಚ್ಚಿಸಿದ 
ಇಳೆಯೊಳು ಬಹು ಯತಿಕರ ಪೂಜಿತನಾದ ಲೀಲ ವಿನೋದ | 
ಬಲು ನಂಬಿದ ಭಕುತರ ಕಲಿಮಲಗಳ ಕಳೆದ ಮನದೊಳು ಪೊಳೆದ 
ಸುಲಲಿತ ಗುಣನಿಧಿ ವಸುಧೇಂದ್ರಾರ್ಯರ ಪ್ರೀಯ ಕವಿಜನಗೇಯ || 4 || 

.... 
.... 

ಶ್ರೀಮದಾಚಾರ್ಯರ ಆಜ್ಞೆಯನ್ನು ಶಿರಸಾವಹಿಸಿ, ಅತ್ಯಂತ ಭಕ್ತಿಯಿಂದ ಅವನನ್ನು ಸ್ತೋತ್ರ ಮಾಡಿದ ಮಧ್ವರ ಸಾಕ್ಷಾತ್ ಶಿಷ್ಯರಾದ ಶ್ರೀನರಹರಿತೀರ್ಥರಿಗೆ ಸೀತಾಸಮೇತನಾಗಿ ಒಲಿದು ಬಂದು ನಲಿದಾತ ಶ್ರೀಮೂಲರಾಮ. 

ಶ್ರೀಮನ್ಮಧ್ವಾಚಾರ್ಯರು ಅತ್ಯಂತ ವೈಭವದಿಂದ ಅರ್ಚಿಸಿ ಮೆಚ್ಚಿಸಿದ ಪ್ರತಿಮೆಯೇ ಶ್ರೀಮನ್ಮೂಲರಾಮಚಂದ್ರನ ಪ್ರತಿಮೆ, 
ಮುಂದೆ ಶ್ರೀಮದಾಚಾರ್ಯರ ಸತ್ಪರಂಪರೆಯಲ್ಲಿ ಬಂದಂತಹ ಶ್ರೀಜಯತೀರ್ಥರು, ಶ್ರೀವಿಜಯೀಂದ್ರತೀರ್ಥರು ಹಾಗೂ ಶ್ರೀರಾಘವೇಂದ್ರತೀರ್ಥರು, ಶ್ರೀಸುಮತೀಂದ್ರತೀರ್ಥರೇ ಮೊದಲಾದ ತಪಸ್ವೀ ಗ್ರಂಥಕಾರ ಯತಿವರೇಣ್ಯರಿಂದ ಬಹುಪ್ರಕಾರವಾಗಿ ಪೂಜೆಗೊಂಡ ಪ್ರತಿಮೆಯೇ ಶ್ರೀಮನ್ಮೂಲರಾಮ ಪ್ರತಿಮೆ, 

ಅದೇ ಪ್ರತಿಮೆಯನ್ನು ತಮ್ಮ ಕಣ್ಣ ಮುಂದೆಯೇ  ಶ್ರೀವಾದೀಂದ್ರತೀರ್ಥ ಕರಕಮಲ ಸಂಜಾತರಾದ ಶ್ರೀವಸುಧೇಂದ್ರತೀರ್ಥರು ಮಹಾಪೂಜೆಯನ್ನು ಕಣ್ತುಂಬಿಕೊಂಡು "ಶ್ರೀವಸುಧೇಂದ್ರಾರ್ಯರ ಪ್ರಿಯ" ಅಜಪೂಜಿಸಿದ ಈ ಮೂಲರಾಮ ಎಂದು ವರ್ಣಿಸಿ ಶ್ರೀರಾಮನನ್ನು ಸ್ತೋತ್ರ ಮಾಡಿದ್ದಾರೆ ಶ್ರೀಜಗನ್ನಾಥದಾಸರು.

ಶ್ರೀಜಗನ್ನಾಥದಾಸರ ಕೃತಿಯ ಪೂರ್ಣ ಪಾಠ ಈ ಕೇಳಗಿನಂತಿದೆ : 

ರಾಮನ್ನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ || ಪ ||
ತಾಮರಸ ಸಖ ಸುವಾಂಶಾಬ್ಧಿ ಶರತ್ಸೋಮಾ ಕಮಲಧೀಮ || ಅ.ಪ. ||

ಧಾತನ ಅನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾ
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದಾ ಕಾಮಿತ ನೆರೆದಾ
ಭೂತಾಧಿಪನ ಭವನದೊಳರ್ಚನೆಗೊಂಡಾ ದೃತ ಕೋದಂಡಾ 
ಮಾತಂಗಾರಿ ವರೂಥಿಯ ಜನಕ ಮೇದಾಗಾರಕೆ ಪೋದಾ || 1 || 

ಸೌಭಾರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿ ದಿಟ್ಟ 
ನಾಭಿ ಜನ್ಮನಿಹ ನಗವರ ಸ್ಥಾನಕೆ ಬಂದ ಶುಭಗಣ ವೃಂದಾ ವೈಭವದಿಂದಲಯೋಧ್ಯಾ ನಗರದಿ ಮೆರೆದಾ ಕಾಮಿತವೆರೆದಾ 
ಸ್ವಾಭಿಮಾನದಲಿ ಸತಿಯಳಿಗಿತ್ತನು ವರವಾ ದೇವರ ದೇವಾ || 2 ||

ಜಾಂಬವಂತನಿಗೆ ಜಾನಕಿ ರಮಣನು ಇತ್ತ ತನ್ನಯ ಧ್ಯಾತ 
ಸಂಭ್ರಮದಲಿ ವೇದಗರ್ಭನೊಡನಾಡ್ದಾ ಮುಕ್ತಿಯ ನೀಡ್ದಾ 
ಕುಂಭೀಶ್ವರನ ಸುಕೋಶದಿ ಬಹುದಿನ ವಾಸ ವೆಸಗಿದನೀಶಾ 
ನಂಬಿ ತುತಿಸಿದ ನರಹರಿ ಮುನಿಪಗೆ ಒಲಿದಾ ಮೋದದಿ ನಲಿದ || 3 ||

 ಅಲವಬೋಧಮುನಿ ಅತಿ ಮೋದದಲರ್ಚಿಸಿದ ಸಲೆ ಮೆಚ್ಚಿಸಿದ 
ಇಳೆಯೊಳು ಬಹು ಯತಿಕರ ಪೂಜಿತನಾದ ಲೀಲ ವಿನೋದಾ 
ಬಲು ನಂಬಿದ ಭಕುತರ ಕಲಿಮಲಿಗಳ ಕಳೆದ ಮನದೊಳು ಪೊಳೆದ 
ಸುಲಲಿತ ಗುಣನಿಧಿ ವಸುದೇಂದ್ರಾರ್ಯರ ಪ್ರಿಯ ಕವಿಜನ ಗೇಯ || 4 ||

 ವಾರಿಧಿ ಬಂಧನ ವಾನರ ನಾಯಕರಾಳ ದೈತ್ಯರ ಸೀಳ್ದಾ 
ನಾರದ ಮುಖ ಮುನಿನಮಿತ ಪದಾಂಬುಜನೀತಾ ತ್ರಿಗುಣಾತೀತ 
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವಾ ದುರಿತವ ತಡೆವ
 ನೀರಜಾಕ್ಷ ಜಗನ್ನಾಥ ವಿಠ್ಠಲ ನಿಶ್ಚಿಂತಾ ಸೀತಾಕಾಂತ ||5 ||
******