Showing posts with label ಸಿರಿಯರಸನ ಕರುಣಾಳುವ ಸರಸಿಜ purandara vittala vyasaraja stutih. Show all posts
Showing posts with label ಸಿರಿಯರಸನ ಕರುಣಾಳುವ ಸರಸಿಜ purandara vittala vyasaraja stutih. Show all posts

Friday, 27 December 2019

ಸಿರಿಯರಸನ ಕರುಣಾಳುವ ಸರಸಿಜ ankita purandara vittala vyasaraja stutih

ಉದಯರಾಗ 

ನೆರೆ ನಂಬಿರೊ ಎಲೆ ಅಣ್ಣ ||ಪ||

ಸಿರಿಯರಸನ ಕರುಣಾಳುವ ಸರಸಿಜಸಂಭವನ ಪಿತನ
ಸುರರೊಡೆಯನ ಸಕಲ ವೇದ ಒರಲೊ ಹರಿಯ
ಪರದೇವತೆ ಇದೇ ಇದೇ ಎಂದು ಕರಕಮಲದೊಳಿಟ್ಟು ಮೆರೆವ
ಪರಮಹಂಸರಾದ ವ್ಯಾಸರಾಯರ ||

ಜ್ಞಾನಭಕ್ತಿ ವೈರಾಗ್ಯ ನಿಧಾನವ ನಮಗಿತ್ತು ಮೆರೆವ
ದಾನವಾರಿ ಗುಣಗಣದಲಿ ಮನಮೊಳೆತಿಪ್ಪನ
ತಾನೆ ದೈವವೆಂಬಾಸುರಕಾನನಗಳ ತರಿದಟ್ಟುವ
ಆನಂದತೀರ್ಥರ ಪಟ್ಟದಾನೆ ವ್ಯಾಸರಾಯರ ||

ಅಂದು ಸಾಸಿರಮುಖದಲಿ ಮೋದದಲಿ ಮು-
ಕುಂದನ ಅಹಿರಾಜ ಪೊಗಳಿದಂದದಲಿಂದು ಕೃಪೆ-
ಯಿಂದ ಪೊರೆವ ಅಭಿನವ ಪುರಂದರವಿಠಲನ ಜಗಕೆ
ತಂದು ತೋರಿದ ವೈಷ್ಣವ ಕುಮುದೇಂದು ವ್ಯಾಸರಾಯರ ||
**********