Showing posts with label ನಾನೇನು ನಿನ್ನನು ಬಿಡುವನಲ್ಲ ದೀನವತ್ಸಲ ಗುರು ಶ್ರೀರಾಘವೇಂದ್ರ gurushyamasundara. Show all posts
Showing posts with label ನಾನೇನು ನಿನ್ನನು ಬಿಡುವನಲ್ಲ ದೀನವತ್ಸಲ ಗುರು ಶ್ರೀರಾಘವೇಂದ್ರ gurushyamasundara. Show all posts

Monday, 6 September 2021

ನಾನೇನು ನಿನ್ನನು ಬಿಡುವನಲ್ಲ ದೀನವತ್ಸಲ ಗುರು ಶ್ರೀರಾಘವೇಂದ್ರ ankita gurushyamasundara

 ರಾಗ: [ಗೌಳ] ತಾಳ: [ಆದಿ]


ನಾನೇನು ನಿನ್ನನು ಬಿಡುವನಲ್ಲ

ದೀನವತ್ಸಲ ಗುರು ಶ್ರೀರಾಘವೇಂದ್ರ


ಸತಿಸುತರ ಬೇಕೆಂದು ಬೇಡೆ ಎನ್ನ

ಮತಿ ಕೆಡಿಸಿ ಪೋಪರು ಬಾರರು ಹಿಂದೆ

ಗತಿ ನೀನೆ ಎನಗಿಂದು ತಂದೆ ಪರ

ಗತಿಯ ಮಾರ್ಗವ ತೋರು ನೀನೆ ಮನಕಿಂದೆ 1

ಅಧಿಕಾರ ಎನಗೀಯಬೇಡ ಮದ ಜ-

ಲದಿ ಎನ್ನನು ಕುಣಿಸಲು ಬೇಡ

ದಧಿಪಾಲ ಚೋರನ ಕೃಪೆಯ ಪಾದವ-

ನಧಿಲಿ ಮನವೀಯೆ ತಡಮಾಡಬೇಡ 2

ಕಾಮಾದಿಗಳನ್ನೆಲ್ಲ ಗೆಲುವ ದಿವ್ಯ

ಹೇಮಾದಿಗಳನೆಲ್ಲ ದೂರದಲ್ಲಿಡುವ

ಪಾಮರ ಮತಿ ಎನಗಿಲ್ಲ ಗುರು

ಶಾಮಸುಂದರನ ಕೃಪೆ ಆಗಬೇಕಲ್ಲ 3

***