Showing posts with label ಅಂದಾದ ರಂಗವಲಿಯನ್ಹಾಕಿ ದೇವನ ಮುಂದೆ madhwesha krishna ANDAADA RANGAVALIYANHAAKI DEVANA MUNDE. Show all posts
Showing posts with label ಅಂದಾದ ರಂಗವಲಿಯನ್ಹಾಕಿ ದೇವನ ಮುಂದೆ madhwesha krishna ANDAADA RANGAVALIYANHAAKI DEVANA MUNDE. Show all posts

Wednesday 3 November 2021

ಅಂದಾದ ರಂಗವಲಿಯನ್ಹಾಕಿ ದೇವನ ಮುಂದೆ ankita madhwesha krishna ANDAADA RANGAVALIYANHAAKI DEVANA MUNDE

 



🌹🌹ಪದ್ಮದ ರಂಗೋಲೆ🌹🌹 ( sampradayada hadu)

ಅಂದಾದ ರಂಗವಾಲಿಯನ್ಹಾಕಿದೇವನ  ಮುಂದೆ

ಅನಂತ ಪುಣ್ಯವ ಗಳಿಸಿಕೊಳ್ಳಿ||ಪಲ್ಲ||

 ಗೌರಿ  ಪುತ್ರನ ಚರಣಕ್ಕೆ ಎರಗಿ

 ವರವ ಬೇಡುತ ಸರಸ್ವತಿ ದೇವಿಗೆ 

 ಹರುಷದಿ ಹಾಕುವ  ರಂಗವಾಲಿಯ

 ಅರುಹುವೆ ನಿಮಗೆ ಅತಿ ಭಕ್ತಿಯಿಂದ||೧||


 #ಹುಣ್ಣಿಮೆ  #ಮುಂದಿನ #ಏಕಾದಶಿ #ದಿನದಿ 

   #ಬೃಹಸ್ಪತಿ #ವಾರವು #ಬಂದಿರಲಾಗ

 #ಒಂಬತ್ತು #ಪದ್ಮವ #ಹಾಕಬೇಕೆಂದು

#ಹಿರಿಯರು #ಪೇಳಿದ #ರೀ #ಮಾತ||೨||


 ಶುಧ್ಧ ಸ್ನಾನವ ಮಾಡಿ ಮಡಿಯುಟ್ಟು

 ದೇವನಮುಂದೆ ರಂಗವಾಲಿಯನ್ಹಾಕಿ 

ಅರಿಷಿಣ ಕುಂಕುಮ ದೀಪ ಧೂಪದಿ

 ಹುಣ್ಣಿಮೆ ವರಿಗೆ ಹಾಕಬೇಕೆನುತ||೩||


#ಒಂಬತ್ತು #ಶಂಖು #ಚಕ್ರ #ಪದ್ಮವ #ಹಾಕುತ್ತ

 #ಒಂಬತ್ತು #ವರುಷವು #ನಿಷ್ಟೆಯಿಂದಲಿ

 #ಸುವರ್ಣದ #ಪದ್ಮವ ಮಾಡಿಸುತ್ತಲಿ

ಬ್ರಾಹ್ಮಣರಿಗೆ ದಾನ ಕೊಡಬೇಕೆನ್ನುತಲಿ||೪||


 ಪವಿತ್ರವಾದ ವ್ರತ ದಾವುದೆನ್ನುತ

 ರುಕ್ಮಿಣಿ  ಹರಿಯ ಕೇಳುತಲಿರಲು

 ಶ್ರೀ ಕೃಷ್ಣನು ನುಡಿದನು ನಸುನಗುತಲಿ

ಈ ಪದ್ಮದ ರಂಗೋಲೆ ಹಾಕಬೇಕೆನುತ||೫||


 ಕಷ್ಟ ದಾರಿದ್ರ್ಯ ವು ದೂರ ಸರಿಯುವವು

ಶ್ರೇಷ್ಟ ಜೀವನ ಸಾಗಿ ಹೋಗುವುದು

 ಲೋಲನ ದಯವು ದೊರಿಯುವದೆಂದು

 ಹಯವದನನು ತಾ ನುಡಿದಿಹನಂದು||೬||


 ನಾರಿಯರಿಗೆ ಬಂದ ರಜಸ್ವಲ ದೋಷವು

 ದೂರವಾಗುವುದೆಂದು ಕೃಷ್ಣನು ನುಡಿಯೆ

 ಸಾರಸಮುಖಿಯರು ಸರಸದಿಂದಲಿ ಹಾಕಿ

 ಮಧ್ವೇಶಕೃಷ್ಣನ  ದಯ ಪೊಂದಲೆಂದು||೭||

***