Prayer to Gouri Devi to bring Ganesha to have his Darshan:
ತಂದು ತೋರಮ್ಮ ನಿನ್ನಾ ಮಗನ
ತಾಯೆ ಉಮಾಮಹೇಶ್ವರಿಯೇ ಬೇಗ ||ಪ||
ವಿದ್ಯೆಗೆ ಅಧಿಪತಿಯಂತೆ
ವಿಘ್ನಗಳ ಕಳೆವನಂತೆ
ವಿನಾಯಕನೆಂಬ ಹೆಸರಂತೆ
ವಿಶ್ವಕ್ಕೆಲ್ಲ ವಂದ್ಯನಂತೆ ||೧||
ಆನೆಯ ಮುಖವಂತೆ
ಆಕಾಶ ತತ್ವವಂತೆ
ಆರುಮುಖನ ಸೋದರನಂತೆ
ಅರಿವನ್ನು ನೀಡುವನಂತೆ ||೨||
ಕುಶಾಗ್ರ ಮತಿಯಂತೆ
ಕುಂಭಾಸಿ ವಾಸನಂತೆ
ಕರುಣೆಯ ಮೂರ್ತಿಯಂತೆ
ಕರುಣೇಶವಿಠಲನ ದಾಸನಂತೆ||೩||
***
Tandu toramma ninnaa magana
Taye Umamaheshvariye bega||pa||
Vidyege adhipatiyante
Vighnagala Kalevanante
Vinayakanemba hesarante
Vishvakkella vandyanante ||1||
Aneya mukhavante
Akasha tatvavante
Arumukhana sodaranante
Arivannu needuvanante ||2||
Kushagra matiyante
Kumbhasi vasanante
Karuneya murtiyante
Karuneshavithalana dasanante||4||
***