..
ಹರಿದಾಸರು
ದಾಸೋತ್ತಮ ನೀನೆ ಶ್ರೀ ವೈಕುಂಠ-ದಾಸೋತ್ತಮ ನೀನೆ ಪ.
ಮಕ್ಕಳುಗಳಿಗೆ ಮೊಮ್ಮಕ್ಕಳುಗಳಿಗೆ ದೇ-ವಕ್ಕಳಿಗೆ ಮನುಮುನಿಗಳಿಗೆಸಿಕ್ಕದ ಪರಬೊಮ್ಮನ ಕೂಸುಮಾಡಿ ತಂ-ದಿಕ್ಕಿ ತೊಡೆಯಮ್ಯಾಲೆ ಆಡಿಸಿ ಮುದ್ದ್ದಿಸುತಿ[ಹ]1
ವೇದ ಶಾಸ್ತ್ರಾದಿಗಳಿಗೆ ಮೈಯದೋರದ-ನಾದಿ ಪುರುಷನ ನೀನೊಲಿಸಿಕೊಂಡೆಈ ಧರೆಯವರ ಪಾವನ ಮಾಡಲೋಸುಗಸಾಧು ಸಜ್ಜನ ಅಪರೋಕ್ಷ ಜ್ಞಾನಿಯಾ[ದೆ] 2
ಹರಿಸರ್ವೋತ್ತಮ ಹಯವದನ ಮೂರುತಿ ವೇಲಾ-ಪುರದರಸಗೆ ಪ್ರತಿಬಿಂಬನಾದವರ ವೈಕುಂಠ ದಾಸೋತ್ತಮ ಎನಗೆ ಹರಿಯತೋರಿಸಿ ಪರಮ ಧನ್ಯನಮಾಡಿದ 3
***