Showing posts with label ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳಆನೆಂತು ವರ್ಣಿಸುವೆನು mohana vittala. Show all posts
Showing posts with label ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳಆನೆಂತು ವರ್ಣಿಸುವೆನು mohana vittala. Show all posts

Sunday 1 August 2021

ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳಆನೆಂತು ವರ್ಣಿಸುವೆನು ankita mohana vittala

 ..

ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳಆನೆಂತು ವರ್ಣಿಸುವೆನು ಪ


ದಾನವಾಂತಕ ಹರಿಯ ಮಾನಸಾರ್ಚನೆ ಮಾಳ್ಪಮಾನಿಸಾ ವೇಷಧರರ ಇವರ ಅ.ಪ.


ನಿತ್ಯನ್ನ ದಾನದಲಿ ನಿರುತರಾಗಿದ್ದ ದಾಸೋತ್ತಮರೆನಿಸುತಿಹರ ಶತೃ ಮಿತ್ರರ ಸಮದೃಷ್ಟಿಯಿಂದಲಿ ನೋಡಿ ಪುರುಷೋತ್ತಮನ ತೋರಿಸುವರ ||ನಿತ್ಯ ನೈಮಿಕವ ಮಾಡಿ ನಿರ್ಜರ ಪತಿಯ ಚಿತ್ತ ಸಂಪಾದಿಸುವರಮತ್ತು ಗಜವೆಂಬ ದುರ್ವಾದಿಗಳನೇ ಮುರಿದು ಹತ್ತು ದಿಕ್ಕಿಲಿ ಮೆರೆವರ ಇವರ 1

ಗುರುಗಳ ಪಾದುಕವ ಶಿರದಲ್ಲಿ ಧರಿಸಿನ್ನು ನರರ ವ್ಯಥೆಯನ್ನು ಕಳೆವರಾಸಿರಿವರನ ಪಾದ ತೀರ್ಥವನೆರೆದು ಅಂಗಾರ ಕರಮುಟ್ಟಿ ಪಾಲಿಸುತ್ತಿಹರ ||ವರ ಮಂತ್ರಾಕ್ಷತೆಯನ್ನಿತ್ತು ಮುದದಿಂದ ಪಾ-ಮರರನ್ನೆ ಪೊರೆವರ ಇವರ2

ಲಕ್ಷ್ಮೀಪತಿ ಶ್ರೀನಿವಾಸಾರ್ಯರೆಮ್ಮನು ಬಿಡದೆ ರಕ್ಷಿಸಲೆಂತೆಂಬೆನೊಅಕ್ಷರ ಪುರುಷ ಅಪ್ರಾಕೃತನ ತೋರಿ ಮದ ಮತ್ಸರವ ಬಿಡಿಸೆಂಬೆನೊ ||ಸೂಕ್ಷ್ಮಾಂಬರಧರ ಮೋಹನ ವಿಠಲನಈ ಕ್ಷಣದಿ ತೋರಿಸೆಂಬೆನೊ ನಾನು 3

**

ಶ್ರೀಮಧ್ವ ಚಿತ್ತಮಂದಿರನೆ ನಿನ್ನಯ ಚರಣತಾಮರಸ ನೆರೆ ನಂಬಿದೆ ಪ

ಕಾಮ ಕ್ರೋಧಗಳನ್ನು ಕಡಿದು ನಿನ್ನಯ ದಿವ್ಯನಾಮಾಮೃತವನುಣಿಸೋ ಸ್ವಾಮಿ ಅ.ಪ.

ಮಾರನ್ನ ಉಪಟಳಕ್ಕಾರದಲೆ ನಾ ಬಲುಪೋರ ಬುದ್ಧಿಯನು ಮಾಡಿ |ಬಾರಿ ಬಾರಿಗೆ ಮನದಿ ಬಯಸಿ ಪರ ನಾರಿಯರಮೋರೆ ಬಣ್ಣವನೆ ನೋಡಿಆರು ಇಲ್ಲದ ವೇಳೆ ಕಣ್ಣು ಸನ್ನೆಯಲವಳಕೋರಿದ್ದು ಇತ್ತು ಕೂಡಿವಾರಿಜನಾಭ ನಿನ್ನಾರಾಧನೆಯ ಮರೆದುಧಾರುಣಿಗೆ ಭಾರಾಗಿ ಅಶನ ಶತ್ರುವಾದೆ 1

ಉಪರಾಗ ಮೊದಲಾದ ದಶಮಿ ದ್ವಾದಶಿ ದಿನದಿಉಪೇಕ್ಷೆಯನು ಮಾಡಿ ಜರಿದೆ |ಉಪಕಾರವೆಂದು ನಿಜವೃತ್ತಿ ಪೇಳಿದರೆನಗೆಅಪಕಾರವೆಂದು ತಿಳಿದು |ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆತಪವೃದ್ಧರನ್ನು ಜರಿದೆ |ಸ್ವಪನದೊಳಗಾದರೂ ವೈರಾಗ್ಯ ಬಯಸದಲೆಕಪಟ ಮನುಜರೊಳಗಾಡಿ ನಿನ್ನ ಮರೆದೆನೊ ಸ್ವಾಮಿ 2

ಭೂಸುರರು ಚಂಡಾಲ ಜಾತಿಯನ್ನದೆ ಬಲುಹೇಸಿಕಿಲ್ಲದಲೆ ತಿರಿದೆ | ಆಶಾಪಾಶಕೆ ಸಿಲುಕಿ ಕಂಡಕಂಡಲಿ ತಿಂದುದೋಷರಾಶಿಯನು ತರುವೆ |ಆ ಸತೀ ಸುತರ ಸಲಹುವೆನೆಂದು ಪರಿಪರಿವೇಷವನು ಧರಿಸಿ ಮೆರೆವೆ |ವಾಸುಕೀ ಶಯನ ವಸುದೇವ ತನಯನೆ ನಿನ್ನದಾಸನೆನಿಸದಲೆ ಅಪಹಾಸ ಮಾನವನಾದೆ 3

ಹರಿದಾಸರಲ್ಲಿ ಒಂದರಘಳಿಗೆ ಕುಳಿತರೆಶಿರವ್ಯಾಧಿಯೆಂದ್ಹೇಳುವೆ |ದುರುಳ ದುರ್ವಾರ್ತೆಗಳ ಪೇಳಲು ಹಸಿತೃಷೆಯಮರೆದು ಆಲಿಸಿ ಕೇಳುವೆ |ತರುಣಿ ತರಳರು ಎನ್ನ ಪರಿಪರಿ ಬೈದರೆಪರಮ ಹರುಷವ ತಾಳುವೆ |ಗುರು ಹಿರಿಯರೊಂದುತ್ತರವನಾಡಲು ಕೇಳಿಧರಿಸಲಾರದಲೆ ಮತ್ಸರಿಸುವೆನೊ ಅವರೊಳಗೆ 4

ನಾ ಮಾಡಿದಪರಾಧಗಳನೆಣಿಸಿ ಬರೆವುದಕೆಭೂ ಮಂಡಲವೆ ನೆರೆ ಸಾಲದೊ | ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಲುಈ ಮತಿಗೆ ಆದು ಪೋಲದೋಹೋಮ ಜಪತಪವು ಇನ್ನೆಷ್ಟು ಮಾಡಲು ಪಾಪಸ್ತೋಮ ಎಂದಿಗು ವಾಲದೊ |ಸಾಮಜ ವರದ ಮೋಹನ್ನ ವಿಠ್ಠಲ ನಿನ್ನ |ನಾಮವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ5

***