..
Kruti by ಸರಸಾಬಾಯಿ Sarasabai
ಕೃಷ್ಣ ನಿನ್ನ ಸ್ಮರಣೆ ಎನಗೆ ಮರೆಸಬೇಡವೋ
ಎನಗೆ ಮರೆಸಬೇಡವೊ ಯನಗೆ ಮರಿರೆಸಬೇಡವೊ ಪ.
ಒಂದು ಅರಿಯದ ಮಂದ ಮತಿಯಳ ಬಂದು ಕಾಯೋ ನೀ
ಬಂದು ಕಾಯೋ ನೀ ಮಂದರೋದ್ಧರ ಸಿಂಧುಶಯನ
ಇಂದಿರೆ ರಮಣ 1
ಹಗಲು ಇರಳು ನಿನ್ನ ಸ್ಮರಣೆ ಎನೆಗೆ ಮರೆಸ ಬೇಡವೋ
ಹಗರಣ ಮಾಡಿಸಿ ಎನಗೆ ನಿನ್ನ ಸ್ಮರಣೆ ಮಾಡಿಸೋ 2
ರಮಾ ವಲ್ಲಭ ವಿಠಲ ನಿನ್ನ ನಾಮ ನಿರಂತರ
ನುಡಿಸೋ ಯನೆಗೆ ಸ್ವಾಮಿ ನಿರಂತರ ನುಡಿಸೋ 3
***