Showing posts with label ಸಜ್ಜನರ ನಡತಿದೊ ಶ್ರೀ ಅರ್ಜುನ ಸಖನ ಪದಾಬ್ಜ pranesha vittala. Show all posts
Showing posts with label ಸಜ್ಜನರ ನಡತಿದೊ ಶ್ರೀ ಅರ್ಜುನ ಸಖನ ಪದಾಬ್ಜ pranesha vittala. Show all posts

Monday, 18 November 2019

ಸಜ್ಜನರ ನಡತಿದೊ ಶ್ರೀ ಅರ್ಜುನ ಸಖನ ಪದಾಬ್ಜ ankita pranesha vittala

by ಪ್ರಾಣೇಶದಾಸರು
ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪಕುಹಕರ ಸಂಗವ ಮಾಡದೆಖೇಚರ|ವಹನನಾಳುಗಳ ಆಳಾಗೀ ||ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ 1

ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತವಿಜ್ಞಾನಘಳಿಸುವದೆ 2

ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ 3

ತತ್ವಭಿಮಾನಿಗಳೆಲ್ಲಸಮೀರಪ್ರ- |ವರ್ತಿಸಿದಂದದಿ ವರ್ತಿಪರೂ ||ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯಶಿವಾದ್ಯರು ಛಿನ್ನರು ಎಂಬುದೆ 4

ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ 5

ಚೇತನಚೇತನವಾದ ಜಗತ್ಯವು |ವಾತನಧೀನದೊಳಿರುತಿಹದೂ ||ಆತನು ರಮೆಯಧೀನವಳುಹರಿ|ದೂತಳೆಂದು ನಿಶ್ಚಯ ತಿಳಕೊಂಬುದೆ 6

ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದಹರಿಮಾರುತ ಮಾತ್ರಾ ||ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭಪ್ರಮುಖರಿಗೊಂದಿಸುತಿಪ್ಪುದೆ 7

ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನುಹರಿಎಂಬುದೆ 8

ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||ಹರಿವಿಧಿಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ 9

ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗಭೂಷಣನೊಳಿದ್ದು ಲಯಾ ||ದ್ವಿಜರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ 10

ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||ಮಂದರಧರಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ 11

ಜ್ಞಾನಾನಂದಾದಿ ಗುಣಭರಿತಹರಿ|ಹೀನತನವನೆಂದಿಗ್ಯು ಅರಿಯಾ ||ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ 12

ಝಷಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ 13

ಆಪಗ ವನಧಿಯನಳನಿಳಶಶಿರವಿ|ಈ ಪೊಡವೀವನನಿರಂತರದೀ ||ಶ್ರೀಪತಿಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ 14

ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||ಹುಸಿಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ 15

ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||ಏನು ನೋಡೆ ನಿರ್ಮಲನಾಗಿಹಹರಿ|ಭಾನುಸಖ ಜಲದೊಳಿರುವಂತೆಂಬುದೆ16

ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ17

ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ 18

ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನಗುಣಮಹತ್ಮಿಯನೂ ||ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇಕೇಳಿವಿಜ್ಞಾನಘಳಿಸುವದೆ 19

ಕಾಲಿಲ್ಲದೆ ನಡಿಯಲು ಬಲ್ಲನುಹರಿ|ಕೇಳುವ ಕಿಂವಿಯಿಲ್ಲದೆ ತನ್ನಾ ||ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿಅಹಿಮಾಡಿಹನೆಂಬುದೆ 20

ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜÕವು ಯಿದು ಎಂದರಿವುದೆ 21

ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||ಮೃತ್ಯುಂಜಯಸಖಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ 22

ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿಶಯನಗೆ ಎಂದೆಂದೂ ||ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ 23

ಬ್ರಹ್ಮಾದಿಗಳಿಗೆ ಜನಕನು ಶ್ರೀಪರ|ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ 24

ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ 25

ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ 26

ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವಕುಟುಂಬಿಯು ಕೈಕೊಂಬಾ ||ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ27

ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ 28

ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜದಳಾಕ್ಷನ ಒಲಿಸಿರೊ ಎಂಬುದೆ 29

ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ 30

ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ31

ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ 32

ಈ ಕರ್ಮವ ಮಾಡಿದೆ ಯನಗೀಪರಿ|ಸಾಕಲ್ಲ್ಯೆವು ಆಯಿತು ಎಂದೂ ||ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ 33

ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ 34

ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀಪರಿಲೀಲಗಳೆಂಬುದೆ 35

ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ 36

ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||ಲೋಪವ ಮಾಡದೆ ನಿರ್ಜಲ ಜಾಗರ- |ವಾಪರಮಮುದದಿ ನಡಸುತಲಿಪ್ಪುದೆ 33

ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ 38

ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲಹರಿಅವಗೆಂದೂ ||ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತಸರ್ವಜÕ ಸುಗುಣ ಪೂರ್ಣೆಂಬುದೆ 39

ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ 40

ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||ತೃತಿಯದಿ ಸತ್ತೀಥ್ರ್ಯಾತ್ರಿಗಳನುಮಾ|ಡುತಲಲ್ಲೆಲ್ಲಿಹ ಮಹಿಮಿ ಕೇಳುವದು 41

ಘೋರತರ ಕುಸಂಸಾರವೆಂಬ ಈ |ವಾರಿಧಿತ್ವರದಾಟುವದಕ್ಕೇ ||ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ 42

ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ 43

ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ 44

ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ 45

ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ 46

ಗುರುಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||ಮರುತಾಂತರ್ಗತನೋಲ್ಗವನಲ್ಲದೆ |ನರಸ್ತೋತ್ರವ ಸ್ವಪ್ನದಿ ಮಾಡದಿಹದೆ 47

ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ 48

ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ 49

ಹೊತ್ತರಾದಿನಿಶಿಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ 50

ಹಾನಿ ಲಾಭ ಜಯ ಅಪಜಯ ಮಾನಪ- |ಮಾನಸುಖಾಸುಖ ಸಮ ಮಾಡೀ ||ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ 51
*******