Showing posts with label ನದೀ ತಾರತಮ್ಯವನ್ನು vijaya vittala ankita suladi ನದೀ ತಾರತಮ್ಯ ಸುಳಾದಿ NADI TARATAMYAVANNU NADI TARATAMYA SULADI. Show all posts
Showing posts with label ನದೀ ತಾರತಮ್ಯವನ್ನು vijaya vittala ankita suladi ನದೀ ತಾರತಮ್ಯ ಸುಳಾದಿ NADI TARATAMYAVANNU NADI TARATAMYA SULADI. Show all posts

Thursday 24 December 2020

ನದೀ ತಾರತಮ್ಯವನ್ನು vijaya vittala ankita suladi ನದೀ ತಾರತಮ್ಯ ಸುಳಾದಿ NADI TARATAMYAVANNU NADI TARATAMYA SULADI

Audio by Vidwan Sumukh Moudgalya

FOR SAHITYA

CLICK NADI TARATAMYA SULADI

 

 " ನದೀ ತಾರತಮ್ಯವನ್ನು ತಿಳಿದು ಚೆನ್ನಾಗಿ... "

  ನದೀ ತಾರತಮ್ಯ  ಸುಳಾದಿ ,

ಶ್ರೀ ವಿಜಯದಾಸರದಾಸರ ರಚನೆ ,

 ರಾಗ : ಹಂಸಾನಂದಿ

ಹಾಡಿರುವವರು :  ಶ್ರೀ ಸುಮುಖ್ ಮೌದ್ಗಲ್ಯ


ನದೀ ತಾರತಮ್ಯದ ಸುಳಾದಿಯ ಚಿಂತನೆ

(ಸಂಗ್ರಹ)

ಪ್ರತಿ ಉದಕದಲ್ಲಿ 24 ತತ್ವಗಳು ,ತತ್ವಾಭಿಮಾನಿ ದೇವತೆಗಳು ಮತ್ತು ಬ್ರಹ್ಮ -ಸರಸ್ವತಿದೇವಿಯರ ಸಂಗಡ, ರಮಾ ಸಹಿತ ನಾರಾಯಣನ ವ್ಯಾಪ್ತಿ ದ್ರವರೂಪವಾಗಿಯೂ ತದಾಕಾರವಾಗಿಯೂ ತಚ್ಛಬ್ಧ ವಾಚ್ಯವಾಗಿಯೂ ಇರುವುದು ಮತ್ತು ಉದಕದಲ್ಲಿ ನಾನಾ ಕ್ರೀಡೆಯಾಡುವರು , ನಾನಾ ಜಲದಲ್ಲಿ ಕಾಲನಾಮಕ ಭಗವಂತನನ್ನು ಸ್ಮರಿಸಬೇಕು.

೧) ಸುರಗಂಗೆ -  ಗಂಗಾ ನದಿಯಲ್ಲಿ ಶಂಖ ಚಕ್ರ ಗಧಾ ಪದುಮಯುಕ್ತ ಮಾಧವ.

೨) ಕುಶಾವತಿ- ಶಂಖಾರಿಗಧಾ ಪದುಮನಾರಾಯಣ

೩) ಕೃಷ್ಣವೇಣಿ - ಯಲ್ಲಿ ಶಂಖ ಚಕ್ರ ಚರಮ ಶಾರ್ಙಧರ ಕೃಷ್ಣಾ

೪) ಯಮುನೆ - ಯಲ್ಲಿ ದಂಡ ಶಂಖ ಶರ ಶಾರಂಗಛಾಪ ಹರಿಕೃಷ್ಣ

೫) ಸರಸ್ವತಿ- ಯಲ್ಲಿ ದ್ವಿಭುಜ ಪದುಮನಾಭ

೬) ಮರುದ್ವತಿ-ರಂಗ

೭) ಸರಯೂ- ನದಿಯಲ್ಲಿ ಧನುರ್ಭಾಣಧರ ರಾಮ

೮) ನರ್ಮದಾ- ನದಿಯಲ್ಲಿ ಚತುರ್ಬಾಹು ಮಹಾವಿಷ್ಣು(ಶಂಖ ಚಕ್ರ ಗಧಾ ಪದುಮ)

೯) ಮಹಸಂಭವ ತುಂಗ - ದ್ವಿಭುಜ ವರಹ

೧೦) ಸಿಂಧು -ಕ್ಷೀರಾಬ್ಧಿಶಾಯಿ 

೧೧) ಭವನಾಸಿಕೆ -ಯಲ್ಲಿ ಚತುರಾಯುಧ ನಾರಾಸಿಂಹ

೧೨) ಕುಮುದ್ವತಿ - ಯಲ್ಲಿ ತ್ರಿವಿಕ್ರಮಾ 

೧೩) ವಂಝರ - ಹಯಗ್ರೀವ ಶಂಖಾಕ್ಷ ಮಾಲಾ

೧೪) ಭೀಮರಥಿ- ಯಲ್ಲಿ ಶ್ರೀಧರ

೧೫) ತಾಮ್ರಪರ್ಣಿ- ಯೊಳು ಅನಂತಾತ್ಮಕ ಸ್ವಾಮಿ

೧೬) ಮಲಾಪಹಾರಿ-ಯಲ್ಲಿ ಜನಾರ್ದನ

೧೭) ಪಿನಾಕಿನಾ- ಚತುರ್ಬಾಹು ಕೇಶವ ವಾರಿಜ ಶಂಖ ಅಸಿ ಗಧಾ

೧೮) ಪೃಥಕ ಸಾಗರ- ಗಾಮಿ ನದಿಗಳಲ್ಲಿ ಜನಾರ್ದನ

೧೯) ಸರೋವರಗಳಲ್ಲಿ -ದತ್ತಾತ್ರಯ 

೨೦) ಸ್ವಾಮಿ ಪುಷ್ಕರಿಣಿ- ವರದ ಕಟಿ ಹಸ್ತಾ ಶಂಖ ಚಕ್ರಧರ ಶ್ರೀನಿವಾಸ

೨೧) ಚಂದ್ರಪುಷ್ಕರಿಣಿ-ಯಲ್ಲಿ ಶ್ರೀರಂಗ ವರಾಹ

೨೨) ದೇವ ಖಾತ- ದಲ್ಲಿ ಗಧಾದರ 

೨೩) ಕ್ಷುದ್ರ ನದಿ- ಯಲ್ಲಿ ಶ್ರೀ ಲಕ್ಷ್ಮೀನಾರಾಯಣ

೨೪) ತಟಾಕ-ದಲ್ಲಿ ಉರಗಶಾಯಿ ಅಚ್ಯುತಾತ್ಮಕ ದೇವ

೨೫) ವಾಪಿ-ಯಲ್ಲಿ ಸಾಸಿರ ಅರಿಧರ

೨೬) ಕೂಪ-ದಲ್ಲಿ ನಾರಾಯಣನು

ಸಪ್ತಸಮುದ್ರಗಳಲ್ಲಿ ,ಮಂತ್ರಗಳಲ್ಲಿ ಅನುಸಂಧಾನಪೂರ್ವಕವಾಗಿ ಪದುಮಜಾಂಡ ಆವರ್ಣ ...ಬಹಿರದಲ್ಲಿಯೂ ದೇಹ ಅಂತರ ನಾಡಿಗಳಲ್ಲಿಯೂ ...ಬಹಿರದಲ್ಲಿಯೂ ಈ ಪ್ರಕಾರ ಚಿಂತೆ ಮಾಡಿ ಸ್ನಾನ ಮಾಡುವುದು. ಇಂಥ ಕಾಲನಿಯಾಮಕ ಭಗವಂತನಿಂದ ವ್ಯಾಪ್ತವಾದ ಸಕಲ ಗಂಗಾದಿ ನದಿಗಳು ನಿಂತಲ್ಲಿ ಕುಳಿತಲ್ಲಿ ಎಲ್ಲ ದೇಶದಲ್ಲಿ ಅಂತರಿಕ್ಷ ಮೇಲು ಕೆಳಗೆ ಅಧ್ಯಂತ ಕಾಲ ಬಿಡದಲೆ ಅತೀ ಸೂಕ್ಷ್ಮ ಪ್ರವಾಹದಿಂದ ತುಂಬಿವೆ ಎಂದು ದರುಶನ ಗ್ರಂಥಗಳಲ್ಲಿ ಸಿದ್ಧವಾಗಿ ಹೇಳಿದೆ.

ಹಿಂದೆ ಜ್ಞಾನಿಗಳಿಗೆ ಗಂಗಾ ಇದ್ದಲ್ಲಿ ಪ್ರತ್ಯಕ್ಷವಾಗಿದ್ದಳೆಂಬುದೇ ಸಿದ್ಧ.

ಇಲ್ಲಿ ಸಮಸ್ತ ತಾತ್ವಿಕರು ಶ್ರೀಕಾಂತನಿಂದ ಸಹವಾಗಿ ಇರುವರು .

ದೋಷ ನಿರ್ಲಿಪ್ತರು ಅನೇಕ ಜೀವರಾಶಿಗಳನ್ನು ಬಾಧಿಸುವ ಯಮನು ಪುಣ್ಯವಂತನಂತೆ ಕರೆಸುತ್ತಾನೆ.(ಕಲಿಬಾಧೆಗೆ ಪಾಪಿಷ್ಟನು ಯಾಕಂದರೆ ಮಡಿ ವಸ್ತ್ರ ಮೈಲಿಗೆ ಆತುಕೊಂಡರೆ ಅದು ಮಡಿ ಆಗಲಿಲ್ಲ ,ಇದರಂತೆ ಮೈಲಿಗೆ ವಸ್ತ್ರ ಮಡಿವಸ್ತ್ರ ತಾಕಿದರೆ ಮೈಲಿಗೆ ವಸ್ತ್ರವೆಂದೇ ಹೇಳುವರು)

ಕಾರಣ ನೀಚೋಚ್ಛ ಭಾವವನ್ನು  ತಿಳಿದು ಪ್ರವರ್ತಿಸಬೇಕು.

ಈ ಬರಹ ಪೂರ್ವಜರು ಬರೆದ ವಹಿಯಲ್ಲಿದೆ.

🕉️🙏ಶ್ರೀ ಕೃಷ್ಣಾರ್ಪಣಮಸ್ತು 🙏🕉️

*******