Showing posts with label ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ tandevaradagopala vittala. Show all posts
Showing posts with label ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ tandevaradagopala vittala. Show all posts

Thursday 5 August 2021

ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ ankita tandevaradagopala vittala

..


kruti: tandevaradagopala vittala (ಪ್ರಹ್ಲಾದಗೌಡರು)


ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ ಕೋಲುಶ್ರೀ ಗುರು ನಿನ್ನ ಬಲಗೊಂಬೆ ಕೋಲ ಪ


ಕೋಲೂ ಶ್ರೀ ಗುರುನಿನ್ನ ಬಲಗೊಂಬೆ ನಿನ್ನ ಪಾದ ಏಕಚಿತ್ತಾದಲ್ಲಿ ಬಲಗೊಂಬೆ ಕೋಲಅ.ಪ.


ರಂಗರಾಜನ ಪಾದ ಭೃಂಗಾನೆಂದೆಸುತಾ ಪಂಚರೂಪಾದಿ ಮೆರೆವೋನು ಕೋಲಪಂಚರೂಪಾದಿ ಮೆರೆವೋನು ಭಾವೀಪಂಚಪ್ರಾಣಾನಾ ಬಲಗೊಂಬೆ ಕೋಲ 1

ಮಂದಜಾಸನ ಪದ ಪೊಂದುವನಾಕಂಡವಾದೀರಾಜಾಖ್ಯನ ಬಲಗೊಂಬೆ ಕೋಲವಾದೀರಾಜಾಖ್ಯನ ಭೂತಾ ಪತಿಯೆಂದು ಆರ್ಯನ್ನ ಮೊದಲೇ ಬಲಗೊಂಬೆ ಕೋಲ 2

ಕಂದುಕಂಠನ ಕೊರಳಿಗ್ಹಾರ ಪದಕವ ಹಾಕಿ ಪರಿಪರಿಯಿಂದ ಮೆರೆಸೋಣ ಕೋಲ ಪರಿಪರಿಯಿಂದ ಹಾರ ಪದಕವ ಹಾಕಿ ಧೀರನ್ನ ಮೊದಲೇ ಬಲಗೊಂಬೆ ಕೋಲ 3

ಕೆಂಡಗಂಣನ ಕಂಡು ರುಂಡ ಹಾರವ ಹಾಕಿ ಪರಿಪರಿಯಿಂದಾ ಭಜಿಸೋಣ ಕೋಲಪರಿಪರಿಯಿಂದಾ ರುಂಡಹಾರವ ಹಾಕಿ ಮಂಡೇ ನದೀ ಧರನ ಬಲಗೊಂಬೆ ಕೋಲ 4

ಅಮರೇಂದ್ರ ಲೋಕದಿ ಶಿವರಾಜ ಧೊರಿಗೆ ಪರಿಪರಿಯಿಂದ ಸೇವಿಪರು ಕೋಲಪರಿಪರಿಯಿಂದ ಸೇವೆಯಾಗೊಂಬಂಥ ವಾದಿರಾಜರ ದಾಸ ವಾದಿರಾಜಾಖ್ಯನ ಬಲಗೊಂಬೆ ಕೋಲ 5

ನಂದಿವಾಹನ ಕಂದ ಪದಕೆ ಬರೊವಂಥ ಧೀರ ವೃಂದಾವನಾರ್ಯರ ವಂದಿಪೆ ಕೋಲಧೀರ ವೃಂದಾವನಾರ್ಯರ ಚಾರು ಚರಣವ ಬಲಗೊಂಬೆಕೋಲ 6

ಮೂರು ಮಂದಿ ಮಧ್ಯೆ ಮಾತಾಡುತಿಪ್ಪದಿಟ್ಟತನದಿ ತಂದೆವರದಗೋಪಾಲವಿಠ್ಠಲನದಿಟ್ಟಾತನದಿ ಬಲಗೊಂಬೆ ಕೋಲ7

***