..
kruti: tandevaradagopala vittala (ಪ್ರಹ್ಲಾದಗೌಡರು)
ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ ಕೋಲುಶ್ರೀ ಗುರು ನಿನ್ನ ಬಲಗೊಂಬೆ ಕೋಲ ಪ
ಕೋಲೂ ಶ್ರೀ ಗುರುನಿನ್ನ ಬಲಗೊಂಬೆ ನಿನ್ನ ಪಾದ ಏಕಚಿತ್ತಾದಲ್ಲಿ ಬಲಗೊಂಬೆ ಕೋಲಅ.ಪ.
ರಂಗರಾಜನ ಪಾದ ಭೃಂಗಾನೆಂದೆಸುತಾ ಪಂಚರೂಪಾದಿ ಮೆರೆವೋನು ಕೋಲಪಂಚರೂಪಾದಿ ಮೆರೆವೋನು ಭಾವೀಪಂಚಪ್ರಾಣಾನಾ ಬಲಗೊಂಬೆ ಕೋಲ 1
ಮಂದಜಾಸನ ಪದ ಪೊಂದುವನಾಕಂಡವಾದೀರಾಜಾಖ್ಯನ ಬಲಗೊಂಬೆ ಕೋಲವಾದೀರಾಜಾಖ್ಯನ ಭೂತಾ ಪತಿಯೆಂದು ಆರ್ಯನ್ನ ಮೊದಲೇ ಬಲಗೊಂಬೆ ಕೋಲ 2
ಕಂದುಕಂಠನ ಕೊರಳಿಗ್ಹಾರ ಪದಕವ ಹಾಕಿ ಪರಿಪರಿಯಿಂದ ಮೆರೆಸೋಣ ಕೋಲ ಪರಿಪರಿಯಿಂದ ಹಾರ ಪದಕವ ಹಾಕಿ ಧೀರನ್ನ ಮೊದಲೇ ಬಲಗೊಂಬೆ ಕೋಲ 3
ಕೆಂಡಗಂಣನ ಕಂಡು ರುಂಡ ಹಾರವ ಹಾಕಿ ಪರಿಪರಿಯಿಂದಾ ಭಜಿಸೋಣ ಕೋಲಪರಿಪರಿಯಿಂದಾ ರುಂಡಹಾರವ ಹಾಕಿ ಮಂಡೇ ನದೀ ಧರನ ಬಲಗೊಂಬೆ ಕೋಲ 4
ಅಮರೇಂದ್ರ ಲೋಕದಿ ಶಿವರಾಜ ಧೊರಿಗೆ ಪರಿಪರಿಯಿಂದ ಸೇವಿಪರು ಕೋಲಪರಿಪರಿಯಿಂದ ಸೇವೆಯಾಗೊಂಬಂಥ ವಾದಿರಾಜರ ದಾಸ ವಾದಿರಾಜಾಖ್ಯನ ಬಲಗೊಂಬೆ ಕೋಲ 5
ನಂದಿವಾಹನ ಕಂದ ಪದಕೆ ಬರೊವಂಥ ಧೀರ ವೃಂದಾವನಾರ್ಯರ ವಂದಿಪೆ ಕೋಲಧೀರ ವೃಂದಾವನಾರ್ಯರ ಚಾರು ಚರಣವ ಬಲಗೊಂಬೆಕೋಲ 6
ಮೂರು ಮಂದಿ ಮಧ್ಯೆ ಮಾತಾಡುತಿಪ್ಪದಿಟ್ಟತನದಿ ತಂದೆವರದಗೋಪಾಲವಿಠ್ಠಲನದಿಟ್ಟಾತನದಿ ಬಲಗೊಂಬೆ ಕೋಲ7
***
No comments:
Post a Comment