Showing posts with label ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ varaha timmappa. Show all posts
Showing posts with label ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ varaha timmappa. Show all posts

Friday 27 December 2019

ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ ankita varaha timmappa

by ನೆಕ್ಕರ ಕೃಷ್ಣದಾಸರು
ಕಾಂಬೋದಿ ರಾಗ ಝಂಪೆತಾಳ

ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ

ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ||ಪ||

ಬೇಸರಿಸಿ ಧರಿಸಿದಳು ಜನನಿ ಎನ್ನನು ದಶ -

ಮಾಸಗ್ರಭದೊಳಿದೂ ಬಹಳ ಬಳಲಿದೆನು
ಹೇಸಿಕೆಯ ವಿಣ್ಮೂತ್ರ ರಾಶಿಯೊಳುಗುದಿಸಿದರೆ
ಅಸುರದಿ ಕೈಯೆತ್ತಿ ಪಿಡಿದು ರಕ್ಷಿಸಿದೆ ||೧||

ಮಲಮೂತ್ರ ಮೈಲಿಗೆಯ ಮೈಯೊಳಗೆ ಧರಿಸಿದರು

ತಿಲಮಾತ್ರ ಹೇಸಿದೆಯ ಎನ್ನೊಳಗೆ ನೀನು
ಜಲಜಮುಖಿ ಎನ್ ತಾಯಿ ಎಲೆಯ ಓಗರವಿಟ್ಟು
ತೊಳೆದ ಹಸ್ತದಿ ಎನಗೆ ಕೊಲೆ(?)ಯನಿಕ್ಕಿದಳು ||೨||

ಮಗುವೆಂದು ಯೋಚಿಸದೆ ಉಗುಳುತ್ತ ಎಂಜಲನು

ಒಗೆದು ಬೀಸಾಡಿದಳು ಎಡದ ಹಸ್ತದಲಿ
ಜಗಳವಾಡಲು ಪಿತನು ಮಗನ ಮೋಹದ ಮೇಲೆ
ತೆಗೆಯಬಾರದೆ ಮಲವನೆಂದು ಜರೆದಪಳು ||೩||

ಪಡೆದ ತಾಯ್ತಂದೆಗಳು ಅಡಗಿ ಹೋದರು

ಎನ್ನ ಬಿಡದೆ ಸಲಹಿದೆ ನೀನು ಪೊಡವಿ ದೇವತೆಯೆ
ಕಡೆಗಾಲದೊಳು ಕೈಯ ಪಿಡಿದು ರಕ್ಷಿಸೆನ್ನ
ಒಡಲ ದುಃಖವ ನೋಡಿ ನುಡಿಯದಿರಬಹುದೆ ||೪||

ಬಲವಾಗಿ ಕೈವಿಡಿದೆ ವರಾಹತಿಮ್ಮಪ್ಪಗೆ

ಗೆಲವಿಂದ ಭೂರಮಣನೆನಿಸಿ ಮೆರೆವ
ಜಲಜನಾಭನೆ ಎನ್ನ ಪಿತನು ಮಾತೆಯು ನೀನು
ಸುಲಭದೊಳು ಮೈದೋರು ಫಲಿತವಹ ಪದವ ||೫||
******