Showing posts with label ಗೋಪಾಲ ಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ sirivatsankita. Show all posts
Showing posts with label ಗೋಪಾಲ ಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ sirivatsankita. Show all posts

Thursday, 5 August 2021

ಗೋಪಾಲ ಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ

ನೀ ಪರಿಹರಿಸು ಜೀಯ್ಯಾ ಪ


ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ

ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ

ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ

ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1


ಸುರಪನ ಗರ್ವವ ಹರಣವ ಮಾಡಿ ನೀ

ವರವಿತ್ತೆ ಕಾಳಿಂಗ ಉರಗನಿಗೆ

ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ

ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2


ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ

ಮರೆಯೋದು ಯನ್ನನು ಸರಿಯೆನೊ ಹರಿಯೆ

ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ

ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3

***