Showing posts with label ಲಕ್ಷ್ಮೀಪ್ರಿಯರ ಚರಣ ಭಜನೆ ನಿರುತದಿಂದ ಮಾಡುವ narahari P. Show all posts
Showing posts with label ಲಕ್ಷ್ಮೀಪ್ರಿಯರ ಚರಣ ಭಜನೆ ನಿರುತದಿಂದ ಮಾಡುವ narahari P. Show all posts

Thursday 5 August 2021

ಲಕ್ಷ್ಮೀಪ್ರಿಯರ ಚರಣ ಭಜನೆ ನಿರುತದಿಂದ ಮಾಡುವ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಲಕ್ಷ್ಮೀಪ್ರಿಯರ ಚರಣ ಭಜನೆ

ನಿರುತದಿಂದ ಮಾಡುವ ಪ


ಲಕ್ಷ್ಮೀಪತಿಯ ಕರುಣ ಪಡೆದು

ಹರುಷದಿ ನಾವ್ ಬದುಕುವ ಅ.ಪ


ಸದ್ಪೈಷ್ಣವ ಕುಮುದಕಾಭಿ

ವೃದ್ಧಿ ತರುವ ಗೋಸುಗ

ಮಧ್ವ ಮತಾಬ್ಧಿಯಲ್ಲಿ

ಉದ್ಭವಿಸಿದ ಚಂದ್ರರ 1

ವ್ಯಾಸಮುನಿಗೆ ಒಲಿದ ಕೃಷ್ಣನ

ಸೋಸಿನಿಂದ ಪೂಜಿಸಿ

ವ್ಯಾಸಸೂತ್ರ ಭಾಷ್ಯ ಉಪ

ನ್ಯಾಸ ಮಾಡಿ ಮರೆವರ 2

ದೀನ ಜನರ ವೃಂದಕೆ ಸುರ

ಧೇನು ಎನಿಪ

ಮುನಿವರ ಶ್ರೀ ನರಹರಿಗೆ ತಾವು

ಅನುಗರಾಗಿ ಇರುವರ 3

***