..
kruti by pradyumna teertha ಪ್ರದ್ಯುಮ್ನತೀರ್ಥರು
ಲಕ್ಷ್ಮೀಪ್ರಿಯರ ಚರಣ ಭಜನೆ
ನಿರುತದಿಂದ ಮಾಡುವ ಪ
ಲಕ್ಷ್ಮೀಪತಿಯ ಕರುಣ ಪಡೆದು
ಹರುಷದಿ ನಾವ್ ಬದುಕುವ ಅ.ಪ
ಸದ್ಪೈಷ್ಣವ ಕುಮುದಕಾಭಿ
ವೃದ್ಧಿ ತರುವ ಗೋಸುಗ
ಮಧ್ವ ಮತಾಬ್ಧಿಯಲ್ಲಿ
ಉದ್ಭವಿಸಿದ ಚಂದ್ರರ 1
ವ್ಯಾಸಮುನಿಗೆ ಒಲಿದ ಕೃಷ್ಣನ
ಸೋಸಿನಿಂದ ಪೂಜಿಸಿ
ವ್ಯಾಸಸೂತ್ರ ಭಾಷ್ಯ ಉಪ
ನ್ಯಾಸ ಮಾಡಿ ಮರೆವರ 2
ದೀನ ಜನರ ವೃಂದಕೆ ಸುರ
ಧೇನು ಎನಿಪ
ಮುನಿವರ ಶ್ರೀ ನರಹರಿಗೆ ತಾವು
ಅನುಗರಾಗಿ ಇರುವರ 3
***
No comments:
Post a Comment