ರಾಗ - : ತಾಳ -
an ಸಾಕುವಂಥ ಧೊರಿಯೆ
ವಾಕು ಲಾಲಿಸಿ ಪೊರಿಯೆ ನಿನ್ನುಪಕಾರ ಯಂದಿಗು ಮರಿಯೆ ll ಪ ll
ಕರಕರಿ ಸಂಸಾರ ಶರಧಿಯೊಳೀಸಲಾರೆ ದೀರಾ l
ಪಾರಗೈಸೊ ಮೊರೆಕೇಳಿ ಬ್ಯಾಗ ಕರಿರಾಜವರದ ಕರುಣಿ ll 1 ll
ಬಲುನೊಂದೆ ಭವದಿ ಬಂದು ನಿನಗರಿಕಿಲ್ಲ ನಿಮಿತ್ತ ಬಂಧು l
ಲಲನಿ ದ್ರೌಪದಿಯಮಾನ ಕಾಯಿದ ಶಿಲಿಉದ್ಧಾರಿ ಸುಗುಣಸಿಂಧು ll 2 ll
ಕೇಳಿಬಂದೆ ನಿನ್ನಾ ಮಹಿಮಿಯು ಪೊಗುಳುವ ದಾಸರನಾ l
ಕಾಲಗೊಪ್ಪಿಸದೆ ಮೇಲು ಗತಿಯಿತ್ತಾ ವಾರ್ತಿ ಸುಪ್ರಸನ್ನಾ ll 3 ll
ಜನ್ಮ ಸಾಕೊ ಮುನ್ನಾ ಭೂಮಿಗೆ ಭಾರಾದೆ ಕೇಳೊ l
ಇನ್ನ ವಮ್ಮಿಗಾದರು ಪುಟ್ಟಿಸದೀಯೊ ಮುಕ್ತಿ ನಂಬಿದೆ ನಿನ್ನಾ ll 4 ll
ಇಂದುವದನ ಕೃಷ್ಣವಿಟ್ಠಲ ಬೆಟ್ಟದ ಶ್ರೀನಿವಾಸಾ l
ಕಂದನ ಸಲಹಿದಿ ಕಂಬದಿಂದುದಿಸಿ ಮುದದಿ ಕೇಳೋ ಭಾಷಾ ll 5 ll
***