ರಾಗ ಭೂಪಾಳಿ ಅಟತಾಳ
ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ ||ಪ||
ಕ್ಷೀರಸಾಗರದಲ್ಲಿ ವಾಸವಾಗಿ ಮಲಗಿರುವಾನೆ ||ಅ||
ಅಸುರರನು ಸದೆದಾನೆ, ಆಸೆ ಕೊಟ್ಟಳಿದಾನೆ
ಶಿಶುವ ಪಿಡಿದಂಬರಕೆ ಸಾಗಿಪಾನೆ
ಎಸೆದು ತೃಣಾವರ್ತನ ಭರದಿ ಮುರಿದಾನೆ
ಶಿಶುಕೃಷ್ಣ ತುರುಗಳನು ಕಾಯಿದಾನೆ ||
ಮಣ್ಣು ಮೆದ್ದೆಯೆನಲು ಮಿಗಿಲಬಾಯಿ ತೆರೆದಾನೆ
ಕಣ್ಣುಸನ್ನೆಗೆ ಜಗವ ಪಾಲಿಪಾನೆ
ಚಿಣ್ಣರೊಡನಾಡುತ ಚೆಲುವ ತುರುಗಾಯಿದಾನೆ
ಬಣ್ಣಬಾಗೆಸುರರನು ಬಿರಿದು ಮುರಿದಾನೆ ||
ಮಡುವ ಕಲಕುತ ಕಾಳಿಹೆಡೆಕುಸಿಯ ತುಳಿದಾನೆ
ಮಡದಿಯರ ವಸ್ತ್ರವನು ಬಿಡದೆ ಕದ್ದಾನೆ
ತಡೆಯದೆ ಯಜ್ಞಾನ್ನಗಳ ಉಂಡು ಒಡನೆ ಮುಕ್ತಿಗೆಯ್ದಾನೆ
ಕಡುಮುಳುಗಿ ಗಿರಿಯನೆ ಕೊಡೆಯ ಪಿಡಿದಾನೆ ||
ಮನೆನನೆಗೆ ಹೋಗಿ ಕೆನೆಮೊಸರು ಸವಿದಾನೆ
ಎನುತಾಗೆ ಪಾಲುಬೆಣ್ಣೆಯನು ಸುರಿದಾನೆ
ವನಿತೆಯರ ವರ್ಜಿಸಲು ಓಡಿ ಮರೆಹೊಕ್ಕಾನೆ
ಚಿನುಮಯಾಂತಕ ಕೃಷ್ಣ ಚೆಲುವ ತುರುಗಾಯಿದಾನೆ ||
ಗೊಲ್ಲಮಕ್ಕಳ ಕೂಡಿ ಗೋವುಗಳ ಕಾಯಿದಾನೆ
ಕಡಲೆ ಅನ್ನವನುಂಡು ಕಡುಸೊಕ್ಕಿದಾನೆ
ಎಲ್ಲರ ಹೃದಯದಲ್ಲಿ ವಾಸವಾಗಿರುತಾನೆ
ಅಂದು ನಾಟಕ ಕೃಷ್ಣ ಚೆಲುವ ತುರುಗಾಯಿದಾನೆ ||
ಕೊಳಲ ಧ್ವನಿಗಳಿಗೆ ಹೆಂಗಳನು ಭ್ರಮೆಗೆಯ್ದಾನೆ
ಲಲನೆಮುಖಿಬಾಲೇರ ಬಳಲಿಪಾನೆ
ನಳಿನಮುಖಿಯರ ಹರುಷಗೊಳಿಸಿ ಸುಖವೀವಾನೆ
ಜಲದೊಳಗೆ ಹೆಂಗಳನು ಭ್ರಮಿಸಿ ಮುಕ್ತಿಗೆಯ್ದಾನೆ ||
ಅಂದು ಮಧುರೆಗೆ ಪೋಗಿ ಬಲು ಬಿಲ್ಲನೆ ಮುರಿದಾನೆ
ಕೊಂದು ರಜಕನ ಕುಬುಜೆಯ ಅಂದಗೆಯ್ದಾನೆ
ಅಂದು ಮಲ್ಲರ ಮಡುಹಿ ಮಾವನ ಕೊಂದಾನೆ
ತಂದೆ ಶ್ರೀಪುರಂದರವಿಠಲ ಮರಿಯನೆ ||
*********
ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ ||ಪ||
ಕ್ಷೀರಸಾಗರದಲ್ಲಿ ವಾಸವಾಗಿ ಮಲಗಿರುವಾನೆ ||ಅ||
ಅಸುರರನು ಸದೆದಾನೆ, ಆಸೆ ಕೊಟ್ಟಳಿದಾನೆ
ಶಿಶುವ ಪಿಡಿದಂಬರಕೆ ಸಾಗಿಪಾನೆ
ಎಸೆದು ತೃಣಾವರ್ತನ ಭರದಿ ಮುರಿದಾನೆ
ಶಿಶುಕೃಷ್ಣ ತುರುಗಳನು ಕಾಯಿದಾನೆ ||
ಮಣ್ಣು ಮೆದ್ದೆಯೆನಲು ಮಿಗಿಲಬಾಯಿ ತೆರೆದಾನೆ
ಕಣ್ಣುಸನ್ನೆಗೆ ಜಗವ ಪಾಲಿಪಾನೆ
ಚಿಣ್ಣರೊಡನಾಡುತ ಚೆಲುವ ತುರುಗಾಯಿದಾನೆ
ಬಣ್ಣಬಾಗೆಸುರರನು ಬಿರಿದು ಮುರಿದಾನೆ ||
ಮಡುವ ಕಲಕುತ ಕಾಳಿಹೆಡೆಕುಸಿಯ ತುಳಿದಾನೆ
ಮಡದಿಯರ ವಸ್ತ್ರವನು ಬಿಡದೆ ಕದ್ದಾನೆ
ತಡೆಯದೆ ಯಜ್ಞಾನ್ನಗಳ ಉಂಡು ಒಡನೆ ಮುಕ್ತಿಗೆಯ್ದಾನೆ
ಕಡುಮುಳುಗಿ ಗಿರಿಯನೆ ಕೊಡೆಯ ಪಿಡಿದಾನೆ ||
ಮನೆನನೆಗೆ ಹೋಗಿ ಕೆನೆಮೊಸರು ಸವಿದಾನೆ
ಎನುತಾಗೆ ಪಾಲುಬೆಣ್ಣೆಯನು ಸುರಿದಾನೆ
ವನಿತೆಯರ ವರ್ಜಿಸಲು ಓಡಿ ಮರೆಹೊಕ್ಕಾನೆ
ಚಿನುಮಯಾಂತಕ ಕೃಷ್ಣ ಚೆಲುವ ತುರುಗಾಯಿದಾನೆ ||
ಗೊಲ್ಲಮಕ್ಕಳ ಕೂಡಿ ಗೋವುಗಳ ಕಾಯಿದಾನೆ
ಕಡಲೆ ಅನ್ನವನುಂಡು ಕಡುಸೊಕ್ಕಿದಾನೆ
ಎಲ್ಲರ ಹೃದಯದಲ್ಲಿ ವಾಸವಾಗಿರುತಾನೆ
ಅಂದು ನಾಟಕ ಕೃಷ್ಣ ಚೆಲುವ ತುರುಗಾಯಿದಾನೆ ||
ಕೊಳಲ ಧ್ವನಿಗಳಿಗೆ ಹೆಂಗಳನು ಭ್ರಮೆಗೆಯ್ದಾನೆ
ಲಲನೆಮುಖಿಬಾಲೇರ ಬಳಲಿಪಾನೆ
ನಳಿನಮುಖಿಯರ ಹರುಷಗೊಳಿಸಿ ಸುಖವೀವಾನೆ
ಜಲದೊಳಗೆ ಹೆಂಗಳನು ಭ್ರಮಿಸಿ ಮುಕ್ತಿಗೆಯ್ದಾನೆ ||
ಅಂದು ಮಧುರೆಗೆ ಪೋಗಿ ಬಲು ಬಿಲ್ಲನೆ ಮುರಿದಾನೆ
ಕೊಂದು ರಜಕನ ಕುಬುಜೆಯ ಅಂದಗೆಯ್ದಾನೆ
ಅಂದು ಮಲ್ಲರ ಮಡುಹಿ ಮಾವನ ಕೊಂದಾನೆ
ತಂದೆ ಶ್ರೀಪುರಂದರವಿಠಲ ಮರಿಯನೆ ||
*********