Showing posts with label ನಿನ್ನ ಸಂಕಲ್ಪಾನುಸಾರ ಮಾಡೋ jagannatha vittala NINNA SANKALPAANUSAARA MAADO. Show all posts
Showing posts with label ನಿನ್ನ ಸಂಕಲ್ಪಾನುಸಾರ ಮಾಡೋ jagannatha vittala NINNA SANKALPAANUSAARA MAADO. Show all posts

Sunday, 15 December 2019

ನಿನ್ನ ಸಂಕಲ್ಪಾನುಸಾರ ಮಾಡೋ ankita jagannatha vittala NINNA SANKALPAANUSAARA MAADO

 ರಾಗ ಕಲ್ಯಾಣಿ   ಖಂಡಛಾಪುತಾಳ 
Audio by Mrs. Nandini Sripad

ಶ್ರೀ ಜಗನ್ನಾಥದಾಸರ ಕೃತಿ


ನಿನ್ನ ಸಂಕಲ್ಪಾನುಸಾರ ಮಾಡೂ ॥ ಪ ॥
ಎನ್ನ ಸಾಕುವ ಧೊರಿಯೆ ಮಾನ್ಯ ಮಾನ್ಯದ ನೀನೂ ॥ ಅ ಪ ॥

ಪಾತ್ರನೆಂದೆನಿಸು ಪಾಪಾತ್ಮನೆಂದೆನಿಸೆನ್ನ ।
ಶ್ರೋತ್ರಿಯನೆನಿಸು ಪರಮಶುಂಠನೆನಿಸು ॥
ಪುತ್ರಮಿತ್ರಾದ್ಯರಿಂ ಬೈಸೂ ಪೂಜಿಯ ಗೈಸು ।
ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕ ನೀನು ॥ 1 ॥

ಜನರೊಳಗೆ ನೀನಿದ್ದು ಜನ್ಮ ಜನ್ಮಗಳಲ್ಲಿ ।
ಗುಣಕಾಲ ಕರ್ಮ ಸ್ವಭಾವಂಗಳಾ ॥
ಅನುಸರಿಸಿ ಪುಣ್ಯಪಾಪಗಳ ಮಾಡಿಸಿ ಫಲಗ - ।
ಳುಣಿಸಿ ಮುಕ್ತರ ಮಾಡಿ ಪೊರವೆ ಕರುಣಾಳು ॥ 2 ॥

ಯಾತಕೆಮ್ಮನು ಬರಿದೆ ದೂರಕನ ಮಾಡುವಿ ಧ - ।
ರಾತಳದೊಳನುದಿನದಿ ಮಾಯಾಪತೇ ॥
ಭೀತಿಗೊಂಬವನಲ್ಲ ಭಯನಿವಾರಣ ।
ಜಗನ್ನಾಥವಿಠಲ ಸಲಹೊ ಜಯಾಧೀಶಾ ॥ 3 ॥
***


pallavi

ninna sankalpAnusAra mADO enna sAkuva dhreyE mAnya mAnavanE

caraNam 1

pAtranenndenisO pApAtmanendenisO iva shrOtriyanendenisO balu
shuNTanendenisO putra mitrAdyarim baisO pUjeya gaisO kartuni jagake sarvatra vyApaka dEva

caraNam 2

janaroLage nInittu janma janmagaLali guNakAla karma svabhAvangaLa anuasarisi
puNya pApangaLa mADisi phalagaLa uNisi muktara mADi poreva karuNALO

caraNam 3

yAtakemmanu initu dUrakana mADuvi dharAtaLadoLanu dinadi mAypatE
bhIti gombuvanalla bhaya nivAraNa jagannAtha viThala jayapradane jagadIshA
***


ರಾಗ ಕಾಂಬೋಧಿ(ಭೂಪ್ ) ಝಂಪೆತಾಳ

ನಿನ್ನ ಸಂಕಲ್ಪಾನುಸಾರ ಮಾಡೋ
ಎನ್ನ ಸಾಕುವ ದೊರೆಯೆ ಮಾನ್ಯ ಮಾನದನೇ ||ಪ||

ಪಾತ್ರನೆಂದೆನಿಸೋ ಪಾಪಾತ್ಮನೆಂದೆನಿಸೋ , ಇವ
ಶ್ರೋತ್ರಿಯನೆಂದೆನಿಸೋ ಬಲುಶುಂಠನೆಂದೆನಿಸೋ
ಪುತ್ರ-ಮಿತ್ರಾದ್ಯರಿಂ ಬೈಸೋ , ಪೂಜೆಯ ಗೈಸೋ
ಕರ್ತು ನೀ ಜಗಕೆ ಸರ್ವತ್ರವ್ಯಾಪಕ ದೇವ ||೧||

ಜನರೊಳಗೆ ನೀನಿದ್ದು ಜನ್ಮಜನ್ಮಗಳಲಿ
ಗುಣಕಾಲ ಕರ್ಮ ಸ್ವಭಾವಂಗಳ
ಅನುಸರಿಸಿ ಪುಣ್ಯ-ಪಾಪಂಗಳ ಮಾಡಿಸಿ ಫಲಗಳ
ಉಣಿಸಿ ಮುಕ್ತರ ಮಾಡಿ ಪೊರೆವ ಕರುಣಾಳೋ ||೨||

ಯಾತಕೆಮ್ಮನು ಇನಿತು ದೂರಕನ ಮಾಡುವಿ
ಧರಾತಳದೊಳನುದಿನದಿ ಮಾಯಾಪತೇ
ಭೀತಿಗೊಂಬುವನಲ್ಲ ಭಯನಿವಾರಣ ಜಗ-
ನ್ನಾಥವಿಠಲ ಜಯಪ್ರದನೇ ಜಗದೀಶಾ ||೩||
********