..
ಹನುಮ ಭೀಮ ಮುನಿಪ ಎನ್ನ
ಮನಕೆ ಬಾರೆಲೊ |
ಮನಸಿಜ ಹರ ಜನಕ ಭಾವಿ ವನಜಾಸನ
ಘನ ಮಹಿಮನೆ ಪ
ಕುಲಜನುಂಗರ ಜಲಧಿ ಧಾಂಟ
ಇಳಿಜಾತೆಗೆ ಸಲಿಸಿ ಮೋದ
ಗೊಳಿಸಿದ ಮಹ ಬಲಶಾಲಿಯೆ 1
ಕಂತು ವಿತನೇಕಾಂತ ಭಕುತ
ಕುಂತಿ ಜಾತ ದಂತಿಪುರದ
ಕಾಂತೆಗೆ ಕೃತಾಂತನಾದ
ಶಾಂತೆನೆ ಮಹಂತರೊಡೆಯ 2
ಶಾಮಸುಂದರವಿಠಲ ಜಗಕೆ
ಸ್ವಾಮಿವಿನುತ ಸ್ಥಾಪಿಸಿದ
ಪ್ರೇಮ ಶರಧಿ ಭೂಮಿ ವಿಬುಧ
ಸ್ತೋಮನಮಿತ ಕಾಮಿತ ಪ್ರದ 3
***