Showing posts with label ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ mahipati. Show all posts
Showing posts with label ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ mahipati. Show all posts

Wednesday, 1 September 2021

ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ ಪ  


ಕಣ್ಣಿಂದ ಕಡಿಯಲಿಲ್ಲ ಚೆನ್ನಾಗೆಲೆವೆ ನೋಡಿ ಉನ್ನಂಥ ಮಹಿಮ ಪೂರ್ಣ ತಾನೆತಾನಾಗಿಹ್ಯ ಕೂಡಿ ಉನ್ಮನವಾಗಿ ಬ್ಯಾಗ ಘನಸುಖ ಬೆರೆದಾಡಿ ಪುಣ್ಯಕ ಪಾರವಿಲ್ಲ ಖೂನದೋರುದಿದರಡಿ 1 

ಸದ್ಬಕ್ತಿಗಿದೇ ಕೀಲ ಸಾಧಿಸುವದೀ ವಿಚಾರ ಸದ್ಗತಿಗಿದೆಮೂಲ ಸಾಧುಜನರ ಸಹಕಾರ ಸಾಧಕರ ಸುಶೀಲ ಬುಧಜನರ ಮಂದಾರ ಸದ್ಫನದ ಕಲ್ಲೋಳ ವಸ್ತುದೋರುವ ವಿವರ 2 

ಗುರುದಯದಿಂದ ನೋಡಿ ಇದೆರಿಟ್ಟುವಂತೀ ಖೂನ ಕರುಣಾಳು ಸ್ವಾಮಿ ನಮ್ಮ ತಾನೆದೋರಿದ ಸಾಧನ ತರಣೋಪಾಯಕ ಪೂರ್ಣ ತೋರುದಿದನು ಸಂಧಾನ ತರಳಮಹಿಪತಿಗಿದೆ ಇಹ್ಯ ಪರಕ ನಿಧಾನ 3

***