ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಹೇಳಿದರೇನು ಪಾಮರ ಜ್ಞಾನಿಯಾಗಬಲ್ಲನೇ | ನಡೆವ ಮನುಜಗೆ ಪ
ಎತ್ತಿಗುತ್ತಮ ಲಿಂಗ ಮುದ್ರೆಯನ್ನೊತ್ತಿದ್ದರೆ ಬಸವನೆಂಬರು | ಕತ್ತೆಯನು ಹಿಡಿ ತಂದು ವತ್ತಲು ಕತ್ತೆಯಲ್ಲದೆ ಬಸವನಪ್ಪುದೆ 1
ಚಿನ್ನ ಬಿಳುಪಿರೆ ಪುಟವನಿಕ್ಕಲು ಬಣ್ಣ ಹೆಚ್ಚುತ ಬಾಹುದು | ಬಿಟ್ಟುದೋರುದೆ 2
ಸ್ವಾತಿ ಜಲಬಿಂದುದುರೆ ಸಿಂಪಿನೊಳಿಂತು ಮೌಕ್ತಿಕವಾಹುದು | ಅಂತ ಘಲ್ಲಿಯೊಳಹದೆ ಜಗದೋಳು ತಾತ ಮಹಿಪತಿ ಕಂದ ಸಾರಿದ 3
***