Showing posts with label ಶುಭವೀವ ನಿರುತದಲಿ ಮಂದಹಾಸಾ ಅಭಯಗಿರಿಯ ವಾಸಾ vijaya vittala. Show all posts
Showing posts with label ಶುಭವೀವ ನಿರುತದಲಿ ಮಂದಹಾಸಾ ಅಭಯಗಿರಿಯ ವಾಸಾ vijaya vittala. Show all posts

Thursday, 17 October 2019

ಶುಭವೀವ ನಿರುತದಲಿ ಮಂದಹಾಸಾ ಅಭಯಗಿರಿಯ ವಾಸಾ ankita vijaya vittala

ವಿಜಯದಾಸ
ಶುಭವೀವ ನಿರುತದಲಿ ಮಂದಹಾಸಾ ಪ

ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ ಅ.ಪ.

ಧೇನಿಪರ ಮನ ಚಿಂತಾಮಣಿಯೋ | ದೇವ |
ನೀನೆ ಗತಿಯೆಂಬುವರ ಧಣಿಯೋ ||
ಜ್ಞಾನಮಯ ಸುಖದ ಸಂದಣಿಯೋ | ಪುಣ್ಯ |
ಕಾನÀನವಾಸ ಸುರರ ಖಣಿಯೋ 1

ವಜ್ರ ಪಂಜರನೋ | ದೇವ |
ದುರುಳರಿಗೆ ವೀರ ಜರ್ಝರನೋ ||
ದುರಿತಕದಳಿಗೆ ಕುಂಜರನೋ |
ವರಕಲ್ಪ ಕಲ್ಪ ವಿಚಲನೋ 2

ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ |
ಮರುತನ್ನ ಹೆಗಲೇರಿ ಬಪ್ಪಾ ||
ಶರಣರಿಗೆ ವರವೀಯುತಿಪ್ಪಾ |
ಸಿರಿ ವಿಜಯವಿಠ್ಠಲ ತಿಮ್ಮಪ್ಪಾ 3
********